‘2018ರ ವಿಧಾನಸಭಾ ಚುನಾವಣೆ ವೇಳೆ ಇದೇ ಸಿದ್ದರಾಮಯ್ಯ, ‘ಅವರಪ್ಪನಾಣೆ ಎಚ್ಡಿಕೆ ಸಿಎಂ ಆಗಲ್ಲ’ ಎಂದಿದ್ದರು. ಆಮೇಲೆ, ಚುನಾವಣಾ ಫಲಿತಾಂಶದ ಬಳಿಕ ಮನೆ ಬಾಗಿಲಿಗೆ ಅವರೇ ಬಂದ್ರು. ನೀವೇ ಸಿಎಂ ಆಗಿ ಎಂದ್ರು. ನಾನು ಸಿಎಂ ಆದೆ. ಈಗಲೂ ಅವರ ಹೇಳಿಕೆಯಿಂದ ನಾವು ನಮ್ಮ ನಿರೀಕ್ಷೆ ಮುಟ್ಟುತ್ತೇವೆ.
ರಾಮನಗರ : ‘2018ರ ವಿಧಾನಸಭಾ ಚುನಾವಣೆ ವೇಳೆ ಇದೇ ಸಿದ್ದರಾಮಯ್ಯ, ‘ಅವರಪ್ಪನಾಣೆ ಎಚ್ಡಿಕೆ ಸಿಎಂ ಆಗಲ್ಲ’ ಎಂದಿದ್ದರು. ಆಮೇಲೆ, ಚುನಾವಣಾ ಫಲಿತಾಂಶದ ಬಳಿಕ ಮನೆ ಬಾಗಿಲಿಗೆ ಅವರೇ ಬಂದ್ರು. ನೀವೇ ಸಿಎಂ ಆಗಿ ಎಂದ್ರು. ನಾನು ಸಿಎಂ ಆದೆ. ಈಗಲೂ ಅವರ ಹೇಳಿಕೆಯಿಂದ ನಾವು ನಮ್ಮ ನಿರೀಕ್ಷೆ ಮುಟ್ಟುತ್ತೇವೆ.
2028ರಲ್ಲಿ ಅಧಿಕಾರಕ್ಕೆ ಬರುತ್ತೇವೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಸಮೀಪದ ಭೈರಮಂಗಲ ಗ್ರಾಮದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾವು ತಪ್ಪದೇ ಅಧಿಕಾರಕ್ಕೆ ಬರುತ್ತೇವೆ
ರಾಜ್ಯದಲ್ಲಿ ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಹಾಗೆ ಹೇಳಿದ್ದಾರೆ ಎಂದರೆ ನಾವು ತಪ್ಪದೇ ಅಧಿಕಾರಕ್ಕೆ ಬರುತ್ತೇವೆ. 2018ರ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯನವರು, ‘ಅವರಪ್ಪನಾಣೆ ಎಚ್ಡಿಕೆ ಸಿಎಂ ಆಗಲ್ಲ’ ಎಂದಿದ್ದರು. ಆಮೇಲೆ, ಚುನಾವಣಾ ಫಲಿತಾಂಶದ ಬಳಿಕ ನಮ್ಮ ಮನೆ ಬಾಗಿಲಿಗೆ ಅವರೇ ಬಂದ್ರು. ನೀವೇ ಸಿಎಂ ಆಗಿ ಎಂದ್ರು. ನಾನು ಸಿಎಂ ಆದೆ. ಈಗಲೂ ಅಷ್ಟೇ. 2028ರಲ್ಲಿ ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2028ಕ್ಕೆ ಜನರ ಸರ್ಕಾರ, ರಾಮರಾಜ್ಯದ ಸರ್ಕಾರ
2028ಕ್ಕೆ ಜನರ ಸರ್ಕಾರ, ರಾಮರಾಜ್ಯದ ಸರ್ಕಾರ ಬಂದೇ ಬರುತ್ತದೆ. ಅದಕ್ಕಾಗಿಯೇ ಆ ಭಗವಂತ 5ನೇ ಬಾರಿ ನನ್ನನ್ನು ಉಳಿಸಿ ಜನರ ಬಳಿಗೆ ಕಳುಹಿಸಿದ್ದಾನೆ. ನಾವು ಜನರ ಬಳಿ ಕೇಳುವ ಅವಶ್ಯಕತೆಯೇ ಇಲ್ಲ. ಎಲ್ಲ ಗ್ಯಾರಂಟಿಗಳನ್ನು ಧೂಳಿಪಟ ಮಾಡಲು ಜನರೇ ಕಾಯುತ್ತಿದ್ದಾರೆ. ಯುವಕರು ಹೋದಲೆಲ್ಲಾ ‘ಮುಂದಿನ ಸಿಎಂ ಕುಮಾರಣ್ಣ’ ಅಂತ ಘೋಷಣೆ ಕೂಗುತ್ತಿದ್ದಾರೆ. ಆದರೆ, ನನಗೆ ಸಿಎಂ ಆಗೋದು ಮುಖ್ಯವಲ್ಲ. ಈ ನಾಡಿನಲ್ಲಿ ಜನತೆಯ ಸರ್ಕಾರ ತರುವುದಷ್ಟೇ ಮುಖ್ಯ ಎಂದರು.