‘ಸ್ವಲ್ಪ ಕಾಯಿರಿ, ನಮಗೂ ಕಾಲ ಬರುತ್ತೆ. ನಾವು ಯಾರೆಂದು ಈ ಸರ್ಕಾರಕ್ಕೆ ಮತ್ತೆ ತೋರಿಸುತ್ತೇವೆ. ಆ ನಂಬಿಕೆ ನನಗಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
- ನಮ್ಮ ವಿರುದ್ಧ ‘ಕೈ’ ಸೇಡಿನ ನಡೆ । ಸ್ವಲ್ಪ ಕಾಯಿರಿ ನಾವು ಯಾರೆಂದು ತೋರಿಸ್ತೇವೆ
- ಜೆಡಿಎಸ್ ಎಲ್ಲಿದೆ ಎಂದವರಿಗೆ ಜನತೆ ಉತ್ತರ । ಹಾಸನ ರ್‍ಯಾಲಿಯಲ್ಲಿ ಕಾಂಗ್ರೆಸ್‌ಗೆ ಸಡ್ಡು==
ನನಗೆ ವಾರಕ್ಕೆ 3 ಬಾರಿಡಯಾಲಿಸಿಸ್: ದೇವೇಗೌಡಕನ್ನಡಪ್ರಭ ವಾರ್ತೆ ಹಾಸನ:‘ನನಗೆ 5 ತಿಂಗಳ ಹಿಂದೆ ಎರಡೂ ಕಿಡ್ನಿಗಳು ವಿಫಲವಾದವು. ಹಾಗಾಗಿ, ಈಗ ನಾನು ವಾರಕ್ಕೆ 3 ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ನಿನ್ನೆಯಷ್ಟೇ ಡಯಾಲಿಸಿಸ್ ಮಾಡಿಸಿಕೊಂಡು ಇಲ್ಲಿಗೆ ಬಂದಿದ್ದೇನೆ. ಆದರೂ, ರಾಜ್ಯದ ಜನರಿಗೆ ಅನ್ಯಾಯವಾದರೆ ಸುಮ್ಮನಿರಲ್ಲ, ಹೋರಾಡುತ್ತೇನೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭಾವುಕರಾಗಿ ನುಡಿದರು. ಆಗ ಜನರು ಕರತಾಡನಗೈದರು.-- ಕನ್ನಡಪ್ರಭ ವಾರ್ತೆ ಹಾಸನ
‘ಸ್ವಲ್ಪ ಕಾಯಿರಿ, ನಮಗೂ ಕಾಲ ಬರುತ್ತೆ. ನಾವು ಯಾರೆಂದು ಈ ಸರ್ಕಾರಕ್ಕೆ ಮತ್ತೆ ತೋರಿಸುತ್ತೇವೆ. ಆ ನಂಬಿಕೆ ನನಗಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.ಜೆಡಿಎಸ್ ಪಕ್ಷಕ್ಕೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಶನಿವಾರ ನಡೆದ ಜೆಡಿಎಸ್ ಜನತಾ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ, ‘ರಾಜ್ಯದ ಕಾಂಗ್ರೆಸ್ ಸರ್ಕಾರ ಎಸ್‌ಐಟಿ (ವಿಶೇಷ ತನಿಖಾ ತಂಡ) ಮೂಲಕ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ನನ್ನ ಮನೆಯಲ್ಲಿ ನನ್ನ ಪುತ್ರ ಎಚ್.ಡಿ.ರೇವಣ್ಣ ಇದ್ದಾಗ ಎಸ್‌ಐಟಿ ಅಧಿಕಾರಿಗಳು ಬಂದು ಯಾವುದೋ ಕೇಸಿನ ಸಂಬಂಧ ರೇವಣ್ಣ ಅವರನ್ನು ಅರೆಸ್ಟ್ ಮಾಡುತ್ತಿದ್ದೇವೆ ಎಂದು ಹೇಳಿ ಅವರನ್ನು ಕರೆದೊಯ್ದರು. ಆಗ ನಾನೂ ಕೂಡ ಅಲ್ಲಿಯೇ ಇದ್ದೆ. ಈಗ ಅದೇ ಸರ್ಕಾರ ರೇವಣ್ಣ ಅವರನ್ನು ಬಂಧಿಸಿದ ಎಸ್‌ಐಟಿ ಅಧಿಕಾರಿಗಳಿಗೆ ಉಡುಗೊರೆ ರೂಪದಲ್ಲಿ ಲಕ್ಷಾಂತರ ರುಪಾಯಿಗಳನ್ನು ನೀಡಿದೆ’ ಎಂದು ಆರೋಪಿಸುತ್ತಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯೊಂದನ್ನು ಜನರ ಮುಂದಿಟ್ಟರು.
‘ನಮ್ಮ ತವರು ನೆಲದಲ್ಲಿಯೇ ನಿಂತು ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತಿದ್ದವರಿಗೆ ಇಂದು ಅಪಾರ ಸಂಖ್ಯೆಯಲ್ಲಿ ಸೇರಿರುವ ಜನರೇ ಉತ್ತರ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಎಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ಪ್ರಾಬಲ್ಯವನ್ನು ನಿರ್ನಾಮ ಮಾಡಬೇಕು ಎನ್ನುವ ದುರುದ್ದೇಶದಿಂದ ಸರಣಿ ಸಮಾವೇಶಗಳನ್ನು ಮಾಡಿದ ಕಾಂಗ್ರೆಸ್‌ಗೆ ಇಂದು ಪ್ರತ್ಯುತ್ತರ ಸಿಕ್ಕಿದೆ. ಸ್ವಲ್ಪ ಕಾಯಿರಿ, ನಮಗೂ ಕಾಲ ಬರಲಿದೆ. ನಾವು ಯಾರೆಂದು ಈ ಸರ್ಕಾರಕ್ಕೆ ಮತ್ತೆ ತೋರಿಸುತ್ತೇವೆ. ಇದೇ ರೀತಿ ನಿಮ್ಮ ಸಹಕಾರ ಸಿಕ್ಕರೆ ಮುಂದಿನ ದಿನಗಳಲ್ಲಿ ಇದೇ ವೇದಿಕೆಯಲ್ಲಿ 18 ಎನ್‌ಡಿಎ ಎಂಪಿಗಳನ್ನು ಕೂರಿಸಿ ಹಾಸನಕ್ಕೆ ಐಐಟಿ ತರುತ್ತೇನೆ. ಜತೆಗೆ, ಇಲ್ಲಿ ವಿಮಾನ ನಿಲ್ದಾಣವನ್ನೂ ಉದ್ಘಾಟನೆ ಮಾಡುತ್ತೇನೆ’ ಎಂದು ಹೇಳಿದರು.