ಕೇಟರಿಂಗ್ ಸೇವೆಗೆ ರಾಜ್ಯದಲ್ಲಿ ಹೆಸರುವಾಸಿ ‘ಅಪೂರ್ವ ವೆಜ್’..!

| N/A | Published : Oct 27 2025, 12:00 AM IST

Mandya Hotel

ಸಾರಾಂಶ

ಮಂಡ್ಯ ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ‘ಅಪೂರ್ವ ವೆಜ್’ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಪರಿಶುದ್ಧ, ರುಚಿಯಾದ ಆಹಾರವನ್ನು ಗ್ರಾಹಕರಿಗೆ ನೀಡುತ್ತಾ ಅತಿ ಬೇಗನೆ ಜನರನ್ನು ಆಕರ್ಷಿಸಿದೆ. ಜೊತೆಗೆ ಅತ್ಯುತ್ತಮ ಕೇಟರಿಂಗ್ ಸೇವೆಯನ್ನು ಒದಗಿಸುವುದರೊಂದಿಗೆ ರಾಜ್ಯದಲ್ಲೇ ಹೆಸರುವಾಸಿಯಾಗಿದೆ.

 ಮಂಡ್ಯ :  ಮಂಡ್ಯ ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ‘ಅಪೂರ್ವ ವೆಜ್’ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಪರಿಶುದ್ಧ, ರುಚಿಯಾದ ಆಹಾರವನ್ನು ಗ್ರಾಹಕರಿಗೆ ನೀಡುತ್ತಾ ಅತಿ ಬೇಗನೆ ಜನರನ್ನು ಆಕರ್ಷಿಸಿದೆ. ಜೊತೆಗೆ ಅತ್ಯುತ್ತಮ ಕೇಟರಿಂಗ್ ಸೇವೆಯನ್ನು ಒದಗಿಸುವುದರೊಂದಿಗೆ ರಾಜ್ಯದಲ್ಲೇ ಹೆಸರುವಾಸಿಯಾಗಿದೆ.

ಮಂಡ್ಯ ನಗರ ವಿವೇಕಾನಂದ ರಸ್ತೆಯಲ್ಲಿರುವ ಅಪೂರ್ವ ವೆಜ್ ವಿಶಾಲವಾಗಿ ತೆರೆದುಕೊಂಡಿದೆ. ದಕ್ಷಿಣ ಮತ್ತು ಉತ್ತರ ಭಾರತೀಯ ಶೈಲಿನ ತಿನಿಸುಗಳನ್ನು ಉತ್ತಮ ಗುಣಮಟ್ಟದೊಂದಿಗೆ ರುಚಿಕಟ್ಟಾಗಿ ತಯಾರಿಸಿ, ಪರಿಶುದ್ಧತೆಯೊಂದಿಗೆ ನೀಡುವ ಮೂಲಕ ನಗರದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ನಗರ ಮಾತ್ರವಲ್ಲದೇ, ರಾಜ್ಯದೆಲ್ಲೆಡೆ ಕೇಟರಿಂಗ್ ಸೇವೆಯ ಮೂಲಕ ಸವಿರುಚಿಯನ್ನು ಜನರಿಗೆ ಉಣಬಡಿಸುತ್ತಿದೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಡುಗೆ ಜವಾಬ್ದಾರಿ ನಿಭಾಯಿಸಿದ್ದರು

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಡುಗೆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದರೊಂದಿಗೆ ಲಕ್ಷಾಂತರ ಜನರಿಗೆ ಗುಣಮಟ್ಟದ ಆಹಾರ ನೀಡಿ ಸೈ ಎನಿಸಿಕೊಂಡಿದ್ದ ‘ಅಪೂರ್ವ ವೆಜ್’ ಮಾಲೀಕರಾದ ಎಚ್.ಕೆ.ಅನಿಲ್, ಇದೀಗ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯಾದ್ಯಂತ ನಡೆಸುತ್ತಿರುವ ಸುವರ್ಣ ಮಹೋತ್ಸವ ಆಚರಣೆಯಲ್ಲೂ ‘ಅಪೂರ್ವ ವೆಜ್‌’ನಿಂದಲೇ ನಳಪಾಕ ತಯಾರಿಸಿ ನೀಡಲಾಗುತ್ತಿದೆ.

 ಈಗಾಗಲೇ ಬೀದರ್, ಕಲಬುರಗಿ, ಹೊಸಪೇಟೆ, ಮಂಗಳೂರು ಸೇರಿದಂತೆ ಹಲವೆಡೆ ಸವಿಯಾದ ಊಟವನ್ನು ನೀಡಿ ಎಲ್ಲ ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಮೈಸೂರು ದಸರಾ ಮಹೋತ್ಸವದಲ್ಲೂ ಅದ್ಭುತವೆನ್ನುವಂತಹ ರುಚಿಕರ ಅಡುಗೆ ತಯಾರಿಸಿ ಜನಪ್ರಿಯತೆ ಪಡೆಯಿತು. ಊಟವನ್ನು ಕೊಂಡಾಡಿದ ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ವೈರಲ್ ಆಗಿ ಹೆಸರನ್ನು ತಂದುಕೊಟ್ಟಿತು. ಮೈಸೂರು ಉದ್ಯೋಗ ಮೇಳದಲ್ಲೂ ರುಚಿಕರ ಊಟದ ಆಸ್ವಾದ ಮೇಳೈಸಿತ್ತು.

ಟೀ-ಕಾಫೀ ಪ್ರಿಯರಿಗೆ ಅಚ್ಚುಮೆಚ್ಚಿನ ಹೋಟೆಲ್

‘ಅಪೂರ್ವ ವೆಜ್’ ಉಪಹಾರ, ಊಟಕ್ಕೆ ಮಾತ್ರ ಹೆಸರುವಾಸಿಯಾಗಿರದೆ ಟೀ-ಕಾಫೀ ಪ್ರಿಯರಿಗೆ ಅಚ್ಚುಮೆಚ್ಚಿನ ಹೋಟೆಲ್ ಆಗಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕಾಫೀ-ಟೀ ಮಾರಾಟವಾಗುತ್ತಿದೆ. ಉತ್ತಮ ಹೊರಾಂಗಣ-ಒಳಾಂಗಣ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಉತ್ತಮವಾದ ಅಡುಗೆ ತಯಾರಿಕೆ ಕೋಣೆಯನ್ನಿರಿಸಿಕೊಂಡು ಕುಶಲ ಅಡುಗೆ ತಯಾರಿಕಾರಿಂದ ಅತ್ಯುತ್ತಮವಾದ ಆಹಾರವನ್ನು ತಯಾರಿಸಿ ತ್ವರಿತವಾಗಿ ಗ್ರಾಹಕರಿಗೆ ನೀಡುತ್ತಾ ಜನರ ಮನಸ್ಸನ್ನು ಸಂತೋಷಪಡಿಸುವಲ್ಲಿ ಯಶಸ್ವಿಯಾಗಿದೆ.

ಇಡ್ಲಿ, ದೋಸೆ, ವಡಾ, ಪೊಂಗಲ್, ಖಾರಾಬಾತ್-ಕೇಸರಿಬಾತ್, ಚಪಾತಿ, ಪೂರಿ ಹೀಗೆ ನಾನಾ ವಿಧವಾದ ವೈಶಿಷ್ಟ್ಯಪೂರ್ಣ ತಿಂಡಿಗಳು, ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಶೈಲಿಯ ಊಟವನ್ನು ಗ್ರಾಹಕರಿಗೆ ನಿರಂತರವಾಗಿ ನೀಡುತ್ತಿದೆ. ನಿತ್ಯವೂ ಹೊಸ ಹೊಸ ಗ್ರಾಹಕರನ್ನು ತನ್ನೆಡೆಗೆ ಸೆಳೆಯುತ್ತಾ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ನಗರದೊಳಗೆ ಮಾಂಸಾಹಾರಿ ಹೋಟೆಲ್‌ಗಳ ಆರ್ಭಟದ ನಡುವೆಯೂ ಸಸ್ಯಾಹಾರವನ್ನು ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ನೀಡುವಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಸದಾ ಚಟುವಟಿಕೆಯಿಂದ ಹೋಟೆಲ್ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ‘ಅಪೂರ್ವ ವೆಜ್’ ಹೋಟೆಲ್ ಮಾಲೀಕ ಎಚ್.ಕೆ.ಅನಿಲ್ ಅವರು ಊಟದ ಗುಣಮಟ್ಟ, ರುಚಿಯಲ್ಲಿ ರಾಜಿಯಾಗದೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರವನ್ನು ನೀಡುತ್ತಾ ಜನಮೆಚ್ಚುಗೆ ಗಳಿಸಿದ್ದಾರೆ. ಯುವ ಉದ್ಯಮಿಯಾಗಿ ಮುನ್ನಡೆಯುತ್ತಿರುವ ಅವರು ಕೇಟರಿಂಗ್ ಸೇವೆಯಲ್ಲಿ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದಾರೆ.ರುಚಿಯಾದ, ಗುಣಮಟ್ಟದ ಆಹಾರವನ್ನು ಗ್ರಾಹಕರಿಗೆ ನೀಡುವುದು ನಮ್ಮ ಧ್ಯೇಯ. ಗ್ರಾಹಕರು ನೀಡುವ ಹಣಕ್ಕೆ ಮೋಸವಾಗದಂತೆ ಸವಿಯಾದ ಊಟವನ್ನು ನೀಡಿದರೆ ತೃಪ್ತರಾಗುತ್ತಾರೆ. ಅದೇ ನಮಗೆ ಸಂತೋಷ. ಕೆಟರಿಂಗ್ ಸೇವೆಯನ್ನು ರಾಜ್ಯಾದ್ಯಂತ ಒದಗಿಸುತ್ತಾ ಜನರಿಗೆ ಹೊಸ ಹೊಸ ರುಚಿಯನ್ನು ಉಣಬಡಿಸುತ್ತಿದ್ದೇವೆ. ಜನರ ಪ್ರೀತಿ-ಸಹಕಾರ ನಮ್ಮ ಬೆಳವಣಿಗೆಗೆ ಪ್ರೋತ್ಸಾಹ ನೀಡಿದೆ.

- ಎಚ್.ಕೆ.ಅನಿಲ್, ಮಾಲೀಕರು, ಅಪೂರ್ವ ವೆಜ್

Read more Articles on