ಸಾರಾಂಶ
ಪ್ರತಾಪ್ ಸಿಂಹ ವಿರುದ್ಧ ಟೀಕೆ ಸರಿಯಲ್ಲಮಾಜಿ ಮೇಯರ್ ಶಿವಕುಮಾರ್ಸಂಸತ್ ಭವನಕ್ಕೆ ನುಗ್ಗಿ ಹೊಗೆಬಾಂಬ್ ಸಿಡಿಸಿದ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಟೀಕೆ ಸರಿಯಲ್ಲ ಎಂದು ಮಾಜಿ ಮೇಯರ್ ಶಿವಕುಮಾರ್ ಹೇಳಿದ್ದಾರೆ.ಮೈಸೂರು
- - ಮಾಜಿ ಮೇಯರ್ ಶಿವಕುಮಾರ್---
ಕನ್ನಡಪ್ರಭ ವಾರ್ತೆ ಮೈಸೂರುಸಂಸತ್ ಭವನಕ್ಕೆ ನುಗ್ಗಿ ಹೊಗೆಬಾಂಬ್ ಸಿಡಿಸಿದ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಟೀಕೆ ಸರಿಯಲ್ಲ ಎಂದು ಮಾಜಿ ಮೇಯರ್ ಶಿವಕುಮಾರ್ ಹೇಳಿದ್ದಾರೆ.
ತಮ್ಮ ಕ್ಷೇತ್ರದವರೊಬ್ಬರು ನೂತನ ಸಂಸತ್ ಭವನ ವೀಕ್ಷಿಸಲು ಬಯಸಿದ್ದರಿಂದ ಪ್ರತಾಪ್ ಸಿಂಹ ಅವರು ಪಾಸ್ ಕೊಡಿಸಿದ್ದಾರೆಯೇ ಹೊರತು ಆತನ ಹಿನ್ನಲೆ ಗೊತ್ತಿದ್ದರೆ ಖಂಡಿತವಾಗಿಯೂ ಈ ರೀತಿ ಮಾಡುತ್ತಿರಲಿಲ್ಲ ಎಂದಿದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ. ಆದರೆ ಸಂಸತ್ ಭವನದೊಳಗೆ ನುಸುಳಿ ಈ ರೀತಿ ಹೊಗೆಬಾಂಬ್ ಸಿಡಿಸಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇರುವ ಸಂಶಯವಿದೆ ಎಂದು ಅವರು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಪೊಲೀಸರು ತನಿಖೆ ನಡೆಸಿ, ಸತ್ಯಾಸತ್ಯತೆ ಗೊತ್ತಾಗುವ ತನಕ ಕಾಯಲು ತಾಳ್ಮೆ ಇಲ್ಲದ ಕಾಂಗ್ರೆಸ್ಸಿಗರು ಪ್ರತಾಪ್ ಸಿಂಹ ಅವರ ವಿರುದ್ಧ ಪ್ರತಿಭಟಿಸವ ಮೂಲಕ ಸಣ್ಣತನ ತೋರಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಪ್ರತಾಪ್ ಸಿಂಹ ಅವರ ಜನಪ್ರಿಯತೆ ಸಹಿಸದೇ ಈ ರೀತಿ ಮಾಡುವುದು ಸರಿಯಲ್ಲ. ಈ ಬಗ್ಗೆ ಕಾಂಗ್ರೆಸ್ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))