ಅಕ್ರಮ ಸಂಬಂಧ ಬಯಲು- ವಿವಾಹಿತ ಮಹಿಳೆ, ಪ್ರಿಯಕರ ಆತ್ಮಹತ್ಯೆ

| Published : Dec 21 2023, 01:15 AM IST

ಅಕ್ರಮ ಸಂಬಂಧ ಬಯಲು- ವಿವಾಹಿತ ಮಹಿಳೆ, ಪ್ರಿಯಕರ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಅವಿವಾಹಿತ ಯುವಕನೊಂದಿಗೆ ಅಕ್ರಮ ಸಂಬಂಧಅವಿವಾಹಿತ ಯುವಕನೊಂದಿಗೆ ಅಕ್ರಮ ಸಂಬಂಧ ವಾಟ್ಸ್ಆ್ಯಪ್ ಮೂಲಕ ಬಯಲಾಗುತ್ತಿದ್ದಂತೆ ವಿವಾಹಿತ ಮಹಿಳೆ ನೇಣಿಗೆ ಶರಣಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಪ್ರಿಯಕರ ಕೂಡ ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ಅವಿವಾಹಿತ ಯುವಕನೊಂದಿಗೆ ಅಕ್ರಮ ಸಂಬಂಧ ವಾಟ್ಸ್ಆ್ಯಪ್ ಮೂಲಕ ಬಯಲಾಗುತ್ತಿದ್ದಂತೆ ವಿವಾಹಿತ ಮಹಿಳೆ ನೇಣಿಗೆ ಶರಣಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಪ್ರಿಯಕರ ಕೂಡ ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ಬೆಳಕಿಗೆ ಬಂದಿದೆ.

ನಿಲಕಂಠಚಾರಿಯವರ ಪುತ್ರ ರಘು ಅವರ ಪತ್ನಿ ಶ್ರುತಿ (28) ಹಾಗೂ ಕಲ್ಕುಣಿಕೆ ಗ್ರಾಮದ ಮಹದೇವನಾಯಕ ಅವರ ಪುತ್ರ ಮುರಳಿ (20) ಎಂಬವರೇ ನೇಣಿಗೆ ಶರಣಾದವರು.

ಅಕ್ರಮ ಸಂಬಂಧ ವಿಷಯ ಬಯಲಾದ ಹಿನ್ನೆಲೆಯಲ್ಲಿ ಶ್ರುತಿ ಮನನೊಂದು ಡಿ. 12ರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದಿರುವ ಸಮಯದಲ್ಲಿ ಬೆಡ್ ರೂಂನ ಪ್ಯಾನ್ ಕೊಂಡಿಗೆ ತನ್ನ ವೇಲ್ನಿಂದ ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾದರೆ, ವಿಷಯ ತಿಳಿದ ಪ್ರಿಯಕರ ಹುಣಸೂರಿನಿಂದ ಕೆ.ಆರ್. ನಗರಕ್ಕೆ ಹೋಗಿ ಎರಡು ದಿನ ತಲೆ ಮರೆಸಿಕೊಂಡಿದ್ದು, ಡಿ. 13ರ ರಾತ್ರಿ ಕೆ.ಆರ್. ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಪಾಳು ಕಟ್ಟಡ ಮರದ ಜಂತಿಗೆ ವೇಲ್ ನಿಂದ ನೇಣು ಬಿಗುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ವಿವರ: ವಿವಾಹಿತ ಮಹಿಳೆ ಶ್ರುತಿ ಪಿರಿಯಪಟ್ಟಣ ತಾಲೂಕಿನ ಸೂಳೆಕೊಬೆ ಗ್ರಾಮದ ಎಸ್.ಪಿ .ಮೂರ್ತಿ ಅವರ ಪುತ್ರಿಯಾಗಿದ್ದು, ಏಳು ವರ್ಷಗಳ ಹಿಂದೆ ರಂಗನಾಥ ಬಡಾವಣೆಯ ರಘು ಅವರೊಂದಿಗೆ ವಿವಾಹವಾಗಿ 5 ವರ್ಷದ ಪುತ್ರ, 3 ವರ್ಷದ ಪುತ್ರಿ ಇಬ್ಬರು ಮಕ್ಕಳಿದ್ದು, ಪ್ರಿಯಕರ ಮುರಳಿಯೊಂದಿಗೆ ಜೊತೆಗಿರುವ ಪೋಟೊಗಳು ಪತಿಯ ಅಣ್ಣನ ಮಗ ಉಲ್ಲಾಶ್ ಮೊಬೈಲ್ ಸ್ಟೇಟಸ್ ನಲ್ಲಿ ಡಿ. 10 ರಂದು ಕಂಡು ಬಂದು ವಿಷಯ ಪತಿಗೆ ತಿಳಿದು ಎರಡು ದಿನಗಳಿಂದ ಮನೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದು ಕೊನೆಗೆ ಜಿಗುಪ್ಸೆಗೊಂಡ ಶ್ರುತಿ ಮನನೊಂದು ಡಿ. 12ರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದಿದ್ದಾಗ ನೇಣಿಗೆ ಶರಣಾಗಿದ್ದಾರೆ.

ವಿಷಯ ತಿಳಿದು ಶ್ರುತಿಯ ತಂದೆ ಹುಣಸೂರಿಗೆ ಅಗಮಿಸಿ ನನ್ನ ಪುತ್ರಿಯ ಸಾವಿಗೆ ಕಾರಣನಾದ ಮುರುಳಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹುಣಸೂರು ನಗರ ಪೊಲೀಸರಲ್ಲಿ ದೂರು ನೀಡಿದ್ದಾರೆ.

ದೂರು ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶ್ರುತಿ ನೇಣಿಗೆ ಶರಣಾಗಿ ಮೃತಪಟ್ಟ ಬಗ್ಗೆ ಹುಣಸೂರಿನಲ್ಲಿ ಗಲಾಟೆಯಾಗಿ ಪೋಲಿಸ್ ಠಾಣೆಯಲ್ಲಿ ಮುರಳಿ ವಿರುದ್ದ ದೂರು ನೀಡಿದ್ದು, ಇದರಿಂದ ಮನನೊಂದು ಹುಣಸೂರಿನಿಂದ ಕೆ.ಆರ್. ನಗರಕ್ಕೆ ಹೋಗಿ ಒಂದು ದಿನ ಕಳೆದು ಮನನೊಂದು ಕೆ.ಆರ್. ನಗರದ ರೈಲ್ವೆ ನಿಲ್ದಾಣದ ಹತ್ತಿರವಿರುವ ಪಾಳು ಕಟ್ಟದದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಡಿ. 14ರ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಕೆ.ಆರ್. ನಗರ ಪೊಲೀಸರು ಸ್ಥಳಕ್ಕೆ ತೆರಳಿ ಮೃತ ಮುರಳಿಯ ತಂದೆ ಮಹದೇವ ನಾಯಕ ರವರಿಂದು ದೂರು ಪದೆದು ಮುಂದಿನ ಕ್ರಮ ಕೈಗೊಂಡಿದ್ದಾರೆ,

ಪ್ರತಿ ದೂರು: ಈ ಘಟನೆ ಸಂಬಂದ ಮೃತ ಗೃಹಿಣಿ ಶ್ರುತಿ ಸಂಬಂಧಿಕರಾದ ಚಲುವಚಾರಿ, ರವಿ, ಮಹೇಂದ್ರ ಅವರು ಮುರಳಿ ಮನೆ ಹತ್ತಿರ ಹೋಗಿ ಗಲಾಟೆ ಮಾಡಿದ್ದು, ಅಲ್ಲದೆ ಜಾತಿ ಮತ್ತು ಸಮುದಾಯಕ್ಕೆ ಹಿನಾಯವಾಗಿ ಬೈದು ಅವಮಾನ ಮಾಡಿದ್ದಾರೆಂದು ಇವರ ಮೇಲೆ ಕಾನೂನು ರಿತ್ಯ ಕ್ರಮಕೈಗೊಳ್ಳಬೇಕು ಎಂದು ರಾಮನಾಯಕ ಅವರ ಪುತ್ರ ಸುರೇಶ್ ಪಟ್ಟಣ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿವಾಹಿತ ಮಹಿಳೆ ಮನೆ ಬಳಿ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲಿಸಿದರು.