ಬೆಂಗ್ಳೂರು ಓಪನ್‌ ಟೆನಿಸ್‌: ಅಗ್ರ ಆಟಗಾರರು ಕಣಕ್ಕೆ

| Published : Feb 08 2024, 01:38 AM IST / Updated: Feb 08 2024, 08:09 AM IST

ಬೆಂಗ್ಳೂರು ಓಪನ್‌ ಟೆನಿಸ್‌: ಅಗ್ರ ಆಟಗಾರರು ಕಣಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನದ ವಿರುದ್ಧ ಡೇವಿಸ್‌ ಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ರಾಮ್‌ಕುಮಾರ್ ರಾಮನಾಥನ್, ಶ್ರೀರಾಮ್ ಬಾಲಾಜಿ ಸೇರಿದಂತೆ ನಾಲ್ವರು ಆಟಗಾರರು ಈ ಬಾರಿ ಬೆಂಗಳೂರು ಓಪನ್ ಟೆನಿಸ್‌ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಬೆಂಗಳೂರು: ಪಾಕಿಸ್ತಾನದ ವಿರುದ್ಧ ಡೇವಿಸ್‌ ಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ರಾಮ್‌ಕುಮಾರ್ ರಾಮನಾಥನ್, ಶ್ರೀರಾಮ್ ಬಾಲಾಜಿ ಸೇರಿದಂತೆ ನಾಲ್ವರು ಆಟಗಾರರು ಈ ಬಾರಿ ಬೆಂಗಳೂರು ಓಪನ್ ಟೆನಿಸ್‌ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಸಿಂಗಲ್ಸ್‌ನಲ್ಲಿ ಸುಮಿತ್ ನಗಾಲ್ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಫೆ.12ರಿಂದ 18 ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ರಾಮ್‌ಕುಮಾರ್‌ಗೆ ಸಾಕೇತ್ ಮೈನೇನಿ ಜೋಡಿಯಾದರೆ, ಬಾಲಾಜಿಗೆ ಜರ್ಮನಿಯ ಆ್ಯಂಡ್ರೆ ಬೆಗೆಮನ್ ಜತೆಯಾಗಲಿದ್ದಾರೆ. ರಾಮ್‌ಕುಮಾರ್ ಮತ್ತು ಮೈನೇನಿ 2022ರಲ್ಲಿ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು.

ಮಾ.4ರಿಂದ ಮಾತ್ರುಕಪ್‌ ಬಾಸ್ಕೆಟ್‌ಬಾಲ್‌

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ಮಹಿಳೆಯರಿಗಾಗಿ ಆಯೋಜಿಸುವ ಮಾತ್ರು ಕಪ್‌ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ ಮಾ.4ರಿಂದ 8ರ ವರೆಗೆ ನಡೆಯಲಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ ಎಂದು ಸಂಸ್ಥೆ ತಿಳಿಸಿದೆ.