ಇಂಡಿಯನ್‌ ಸೂಪರ್ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ 3ನೇ ಜಯ ದಾಖಲಿಸಿದೆ.

ಬೆಂಗಳೂರು: ಇಂಡಿಯನ್‌ ಸೂಪರ್ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ 3ನೇ ಜಯ ದಾಖಲಿಸಿದೆ. ಬುಧವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಚೆನ್ನೈಯಿನ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬಿಎಫ್‌ಸಿ 1-0 ಗೋಲಿನಿಂದ ಗೆಲುವು ಸಾಧಿಸಿತು. ಇದರೊಂದಿಗೆ ಸುನಿಲ್‌ ಚೆಟ್ರಿ ಪಡೆ ಅಂಕಪಟ್ಟಿಯಲ್ಲಿ 11ರಿಂದ 6ನೇ ಸ್ಥಾನಕ್ಕೆ ಜಿಗಿದಿದೆ. ತಂಡ 14 ಪಂದ್ಯಗಳಲ್ಲಿ ಕೇವಲ 3ರಲ್ಲಿ ಜಯಗಳಿಸಿ, 5 ಡ್ರಾ, 6 ಸೋಲು ಕಂಡಿದೆ. ಪ್ಲೇ-ಆಫ್‌ಗೇರಬೇಕಿದ್ದರೆ ತಂಡ ಇನ್ನುಳಿದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಗೆಲ್ಲಬೇಕಿದೆ.

--ಪಂದ್ಯಕ್ಕೂ ಮುನ್ನ ಟೆನಿಸಿಗ ರೋಹನ್‌ ಬೋಪಣ್ಣಗೆ ಬಿಎಫ್‌ಸಿ ಜೆರ್ಸಿ ನೀಡಿದ ಚೆಟ್ರಿ ಟೆಸ್ಟ್‌: ದ.ಆಫ್ರಿಕಾ ವಿರುದ್ಧ

ಕಿವೀಸ್‌ಗೆ 281 ರನ್‌ ಜಯ

ಮೌಂಟ್‌ ಮಾಂಗನುಯಿ(ನ್ಯೂಜಿಲೆಂಡ್‌): ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ 281 ರನ್‌ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ಕಿವೀಸ್‌ 1-0 ಮುನ್ನಡೆ ಪಡೆಯಿತು.

3ನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಕಳೆದುಕೊಂಡು 179 ರನ್‌ ಗಳಿಸಿದ್ದ ನ್ಯೂಜಿಲೆಂಡ್ ಬುಧವಾರ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಗೆಲುವಿಗೆ 529 ರನ್‌ಗಳ ಬೃಹತ್‌ ಗುರಿ ಪಡೆದ ದ.ಆಫ್ರಿಕಾ 247ಕ್ಕೆ ಸರ್ವಪತನ ಕಂಡಿತು. ಡೇವಿಡ್‌ ಬೆಡಿಂಗ್‌ಹ್ಯಾಮ್‌(87) ಏಕಾಂಗಿ ಹೋರಾಟಕ್ಕೆ ಫಲ ಸಿಗಲಿಲ್ಲ. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ 511 ರನ್‌ ದಾಖಲಿಸಿದ್ದ ಕಿವೀಸ್‌, ಬಳಿಕ ದ.ಆಫ್ರಿಕಾವನ್ನು 162ಕ್ಕೆ ನಿಯಂತ್ರಿಸಿ 349 ರನ್‌ ಮುನ್ನಡೆ ಪಡೆದಿತ್ತು.