ಅಂಡರ್‌-19 ಏಷ್ಯಾಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಬಾಂಗ್ಲಾದೇಶ ಶಾಕ್‌!

| Published : Dec 16 2023, 02:00 AM IST

ಅಂಡರ್‌-19 ಏಷ್ಯಾಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಬಾಂಗ್ಲಾದೇಶ ಶಾಕ್‌!
Share this Article
  • FB
  • TW
  • Linkdin
  • Email

ಸಾರಾಂಶ

ಅಂಡರ್‌-19 ಏಷ್ಯಾಕಪ್‌ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 4 ವಿಕೆಟ್‌ ಸೋಲು. ವಿಶ್ವಕಪ್‌ಗೂ ಮುನ್ನ ಯುವ ಭಾರತಕ್ಕೆ ಭಾರಿ ಆಘಾತ.

ದುಬೈ: ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್‌ಗೂ ಮುನ್ನ ಭಾರತ ಅಂಡರ್‌-19 ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ಏಷ್ಯಾಕಪ್‌ನ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 4 ವಿಕೆಟ್‌ ಸೋಲು ಅನುಭವಿಸಿದ ಭಾರತ, ವಿಶ್ವಕಪ್‌ಗೂ ಮುನ್ನ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದೆ.

ಶುಕ್ರವಾರದ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡ ಭಾರತ 42.4 ಓವರಲ್ಲಿ 188 ರನ್‌ಗೆ ಆಲೌಟ್‌ ಆಯಿತು. ಮುರುಗನ್‌ ಅಭಿಷೇಕ್‌ (62) ಹಾಗೂ ಮುಷೀರ್‌ ಖಾನ್‌ (50) ಹೊರತುಪಡಿಸಿ ಉಳಿದ್ಯಾರೂ ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆರಂಭಿಕ ಆಘಾತದ ಹೊರತಾಗಿಯೂ ಬಾಂಗ್ಲಾದೇಶ 4 ವಿಕೆಟ್‌ ಉಳಿಸಿಕೊಂಡು ಇನ್ನೂ 7.1 ಓವರ್‌ ಬಾಕಿ ಇರುವಂತೆ ಜಯ ಸಾಧಿಸಿತು. 34ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಅರಿಫುಲ್‌ (94) ಹಾಗೂ ಅಹ್ರಾರ್‌(44) ಆಸರೆಯಾದರು. ಇವರಿಬ್ಬರ ನಡುವೆ 4ನೇ ವಿಕೆಟ್‌ಗೆ 138 ರನ್‌ ಜೊತೆಯಾಟ ಮೂಡಿಬಂತು.

ಪಾಕ್‌ಗೆ ಸೋಲುಣಿಸಿ ಫೈನಲ್‌ಗೆ ಯುಎಇ!

ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಯುಎಇ 11 ರನ್‌ಗಳ ರೋಚಕ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತು. ಯುಎಇ ನೀಡಿದ್ದ 194 ರನ್‌ ಗುರಿಯನ್ನು ಬೆನ್ನತ್ತಲು ಇಳಿದ ಪಾಕ್, 182 ರನ್‌ಗೆ ಆಲೌಟ್‌ ಆಯಿತು. ಭಾನುವಾರ (ಡಿ.17) ಫೈನಲ್‌ನಲ್ಲಿ ಬಾಂಗ್ಲಾದೇಶ-ಯುಎಇ ಟ್ರೋಫಿಗಾಗಿ ಸೆಣಸಲಿವೆ.