ಸಾರಾಂಶ
ಪ್ರೊ ಕಬಡ್ಡಿ: ಬೆಂಗಳೂರಿಗೆ 18-43 ಹೀನಾಯ ಸೋಲುಸ್ಪಂದನ್ ಕಣಿಯಾರ್‌ಕನ್ನಡಪ್ರಭ ವಾರ್ತೆ ಪುಣೆಆರಂಭಿಕ 4 ಸೋಲುಗಳ ಬಳಿಕ ನಿಧಾನಕ್ಕೆ ಜಯದ ಹಳಿಗೆ ಮರಳುತ್ತಿದ್ದ ಬೆಂಗಳೂರು ಬುಲ್ಸ್ ಅನ್ನು ಪುಣೇರಿ ಪಲ್ಟನ್ ಕಟ್ಟಿಹಾಕಿದೆ. ತನ್ನ ತವರಿನ ಚರಣದ ಕೊನೆಯ ಪಂದ್ಯದಲ್ಲಿ ಬುಲ್ಸ್ ವಿರುದ್ಧ 18-43 ಅಂತರದ ದೊಡ್ಡ ಗೆಲುವು ಪಡೆದ ಪಲ್ಟನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದರೆ, 7 ಪಂದ್ಯಗಳಲ್ಲಿ 5ನೇ ಸೋಲು ಕಂಡಿರುವ ಬುಲ್ಸ್, ಪಟ್ಟಿಯಲ್ಲಿ ಮತ್ತಷ್ಟು ಕೆಳಗಿಳಿದಿದೆ. ಮೊದಲ 5 ನಿಮಿಷಗಳಲ್ಲೇ ಬುಲ್ಸ್ ಹಣೆಬರಹ ನಿರ್ಧಾರವಾಯಿತು. 5ನೇ ನಿಮಿಷದಲ್ಲಿ ಮೊದಲ ಸಲ ಆಲೌಟ್ ಬುಲ್ಸ್, 13ನೇ ನಿಮಿಷದಲ್ಲಿ 2ನೇ ಸಲ ಆಲೌಟ್ ಆಗಿ ಮೊದಲಾರ್ಧದ ಅಂತ್ಯಕ್ಕೆ 8-28ರ ಹಿನ್ನಡೆ ಅನುಭವಿಸಿತು.ದ್ವಿತೀಯಾರ್ಧ ಸಹ ಬುಲ್ಸ್‌ಗೆ ಸಾಮಾಧಾನಕರವಾಗಿರಲಿಲ್ಲ. 23ನೇ ನಿಮಿಷದಲ್ಲಿ ಮತ್ತೆ ಆಲೌಟ್ ಆದ ಬುಲ್ಸ್, ನಿರಂತರವಾಗಿ ಅಂಕಗಳನ್ನು ಕೈಚೆಲ್ಲುತ್ತಾ 25 ಅಂಕಗಳ ಹೀನಾಯ ಸೋಲಿಗೆ ಶರಣಾಯಿತು. ಪುಣೇರಿ ಪರ ಮ್ಯಾಟ್‌ಗಿಳಿದ ಎಲ್ಲಾ ಆಟಗಾರರೂ ಉತ್ತಮ ಕೊಡುಗೆ ನೀಡಿದರು. ತ್ರಿವಳಿ ರೈಡರ್‌ಗಳಾದ ಅಸ್ಲಾಂ, ಮೋಹಿತ್, ಪಂಕಜ್ ಕ್ರಮವಾಗಿ 6, 8, 5 ಅಂಕ ಗಳಿಸಿದರೆ, ಡಿಫೆಂಡರ್‌ಗಳು ಒಟ್ಟಾಗಿ 17 ಅಂಕ ಸಂಪಾದಿಸಿದರು. ಇಂದಿನ ಪಂದ್ಯ: ತಲೈವಾಸ್-ಪಾಟ್ನಾ, ರಾತ್ರಿ 8ಕ್ಕೆ, ಹರ್ಯಾಣ-ಟೈಟಾನ್ಸ್, ರಾತ್ರಿ 9ಕ್ಕೆ, ಸ್ಥಳ: ಚೆನ್ನೈ
ಜೈಪುರಕ್ಕೆ ದೊಡ್ಡ ಜಯ!ಬುಧವಾರದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ 41-24ರ ಅಂತರದಲ್ಲಿ ಯು.ಪಿ.ಯೋಧಾಸ್ ವಿರುದ್ಧ ದೊಡ್ಡ ಗೆಲುವು ಸಾಧಿಸಿತು. ಮೊದಲಾರ್ಧದಲ್ಲೇ ಯೋಧಾ ಪಡೆಯನ್ನು 2 ಬಾರಿ ಆಲೌಟ್ ಮಾಡಿ 20 ನಿಮಿಷಗಳ ಅಂತ್ಯಕ್ಕೆ 24-9ರ ಮುನ್ನಡೆ ಸಾಧಿಸಿದ ಜೈಪುರ, ದ್ವಿತೀಯಾರ್ಧದಲ್ಲಿ ಪ್ರಬಲ ಪೈಪೋಟಿ ಎದುರಾದರೂ ಮೊದಲಾರ್ಧದಲ್ಲಿ ಸಾಧಿಸಿದ್ದ 15 ಅಂಕಗಳ ಅಂತರದಿಂದಾಗಿ ಜಯ ಕೈಜಾರದಂತೆ ಎಚ್ಚರ ವಹಿಸಿತು.
;Resize=(128,128))
;Resize=(128,128))
;Resize=(128,128))