ಸಾರಾಂಶ
ಇಲ್ಲಿನ ಸಮೀಪದ ಅಣ್ಣೂರು ಗ್ರಾಮದಲ್ಲಿ ಶ್ರೀ ಮಾರಮ್ಮ ಸೇವಾ ಸಮಿತಿ ಹಾಗೂ ಅರುಣೋದಯ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಕದಂಬ ಕೆನ್ನಾಳು ತಂಡ ಪ್ರಥಮ ಸ್ಥಾನದೊಂದಿಗೆ 15 ಸಾವಿರ ರು. ನಗದು ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿದೆ. ಶ್ರೀ ಮಾರಮ್ಮ ದೇವಿ ಯುವಕರ ತಂಡ ಅಣ್ಣೂರು ದ್ವಿತೀಯ ಸ್ಥಾನ ಪಡೆದುಕೊಂಡು 10 ಸಾವಿರ ರು. ನಗದು ಹಾಗೂ ಟ್ರೋಫಿ, ತುಮಕೂರು ತಂಡಕ್ಕೆ ತೃತೀಯ ಬಹುಮಾನ 5 ಸಾವಿರ ರು. ನಗದು ಹಾಗೂ ಟ್ರೋಫಿ, ಟಿ.ನರಸಿಪುರ ತಂಡಕ್ಕೆ ನಾಲ್ಕನೇ ಬಹುಮಾನ 3 ಸಾವಿರ ರು. ನಗದು ಹಾಗೂ ಟ್ರೋಫಿ ಪಡೆದುಕೊಂಡಿದ್ದಾರೆ. ತೀರ್ಪುಗಾರರಾಗಿ ಅಣ್ಣೂರು ಕುಮಾರ್, ಎನ್.ಬಿ.ಕೃಷ್ಣ, ಕೆ.ಜೆ.ರಮೇಶ್, ಡಿ.ಬಿ.ಶಿವಣ್ಣ, ಓದುಲಿಂಗ, ಎಂ.ಶ್ರೀನಿವಾಸ್, ಬಸವರಾಜು, ಸುದೀಪ್, ಭಾಗಹಿಸಿದ್ದರು.
ಭಾರತೀನಗರ: ಇಲ್ಲಿನ ಸಮೀಪದ ಅಣ್ಣೂರು ಗ್ರಾಮದಲ್ಲಿ ಶ್ರೀ ಮಾರಮ್ಮ ಸೇವಾ ಸಮಿತಿ ಹಾಗೂ ಅರುಣೋದಯ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಕದಂಬ ಕೆನ್ನಾಳು ತಂಡ ಪ್ರಥಮ ಸ್ಥಾನದೊಂದಿಗೆ 15 ಸಾವಿರ ರು. ನಗದು ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿದೆ. ಶ್ರೀ ಮಾರಮ್ಮ ದೇವಿ ಯುವಕರ ತಂಡ ಅಣ್ಣೂರು ದ್ವಿತೀಯ ಸ್ಥಾನ ಪಡೆದುಕೊಂಡು 10 ಸಾವಿರ ರು. ನಗದು ಹಾಗೂ ಟ್ರೋಫಿ, ತುಮಕೂರು ತಂಡಕ್ಕೆ ತೃತೀಯ ಬಹುಮಾನ 5 ಸಾವಿರ ರು. ನಗದು ಹಾಗೂ ಟ್ರೋಫಿ, ಟಿ.ನರಸಿಪುರ ತಂಡಕ್ಕೆ ನಾಲ್ಕನೇ ಬಹುಮಾನ 3 ಸಾವಿರ ರು. ನಗದು ಹಾಗೂ ಟ್ರೋಫಿ ಪಡೆದುಕೊಂಡಿದ್ದಾರೆ. ತೀರ್ಪುಗಾರರಾಗಿ ಅಣ್ಣೂರು ಕುಮಾರ್, ಎನ್.ಬಿ.ಕೃಷ್ಣ, ಕೆ.ಜೆ.ರಮೇಶ್, ಡಿ.ಬಿ.ಶಿವಣ್ಣ, ಓದುಲಿಂಗ, ಎಂ.ಶ್ರೀನಿವಾಸ್, ಬಸವರಾಜು, ಸುದೀಪ್, ಭಾಗಹಿಸಿದ್ದರು.
ಕಾರ್ಯಕ್ರಮದ ಆಯೋಜಕ ಪುರುಷೋತ್ತಮ್, ಪ್ರಜ್ವಲ್, ಸುಮಂತ್, ಶ್ರೀ ಮಾರಮ್ಮ ಸೇವಾಸಮಿತಿಯ ಗೌರವಾಧ್ಯಕ್ಷ ನಾಡಗೌಡ ರಾಜೀವ್, ಅಧ್ಯಕ್ಷ ಎ.ಟಿ.ಸಿದ್ದರಾಮೇಗೌಡ, ಕಾರ್ಯದರ್ಶಿ ಹೊಂಡಾಸಿದ್ದೇಗೌಡ, ಖಜಾಂಚಿ ಅಣ್ಣೂರು ನವೀನ್, ಮುಖಂಡರಾದ ಹರ್ಷರಾಮಣ್ಣ, ಟಿ.ತಮ್ಮಣ್ಣ, ಎ.ಆರ್.ಚಂದ್ರೇಶ್, ಸೇರಿದಂತೆ ಹಲವರು ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.-------