ಸಾರಾಂಶ
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಡಿ. 13ರಿಂದ 17ರವರೆಗೆ 33ನೇ ರಾಷ್ಟ್ರೀಯ ಸಬ್-ಜೂನಿಯರ್ ಬಾಲಕ, ಬಾಲಕಿಯರ ಖೋ-ಖೋ ಚಾಂಪಿಯನ್‌ಶಿಪ್ ನಡೆಯಲಿದೆ.
ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಡಿ. 13ರಿಂದ 17ರವರೆಗೆ 33ನೇ ರಾಷ್ಟ್ರೀಯ ಸಬ್-ಜೂನಿಯರ್ ಬಾಲಕ, ಬಾಲಕಿಯರ ಖೋ-ಖೋ ಚಾಂಪಿಯನ್‌ಶಿಪ್ ನಡೆಯಲಿದೆ. 29 ರಾಜ್ಯ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿಂದ ತಲಾ 36 ಬಾಲಕ, ಬಾಲಕಿಯರ ತಂಡಗಳು ಭಾಗವಹಿಸಿದ್ದು, ಅಂದಾಜು 1300 ಆಟಗಾರರು ಆಗಮಿಸಲಿದ್ದಾರೆ. 200 ಅಧಿಕಾರಿಗಳು ಪಂದ್ಯಾವಳಿ ಯಶಸ್ಸು ಕಾಣಲು ಶ್ರಮಿಸಲಿದ್ದಾರೆ. ಕ್ರೀಡಾಂಗಣದಲ್ಲಿ 5 ಅಂಕಣಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಖಿಲ ಭಾರತ ಖೋ-ಖೋ ಸಂಸ್ಥೆ ಉಪಾಧ್ಯಕ್ಷ ಹಾಗೂ ರಾಜ್ಯ ಖೋ-ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ ಮಾಹಿತಿ ನೀಡಿದ್ದಾರೆ.