ಶಾಲೆಗಳಲ್ಲಿ ಎಸಿ ವೆಚ್ಚ ಪೋಷಕರೇ ಭರಿಸಬೇಕು: ಹೈಕೋರ್ಟ್‌

| Published : May 06 2024, 12:37 AM IST / Updated: May 06 2024, 05:31 AM IST

ಶಾಲೆಗಳಲ್ಲಿ ಎಸಿ ವೆಚ್ಚ ಪೋಷಕರೇ ಭರಿಸಬೇಕು: ಹೈಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಗಳಲ್ಲಿ ಎಸಿ ಹಾಕಬೇಕೆಂದು ಪೋಷಕರು ಬಯಸಿದರೆ ಅದರ ವೆಚ್ಚವನ್ನು ಅವರೇ ಭರಿಸಬೇಕು ಎಂದು ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ನವದೆಹಲಿ: ಶಾಲೆಗಳಲ್ಲಿ ತರಗತಿ ಕೋಣೆಗಳಲ್ಲಿ ಹವಾ ನಿಯಂತ್ರಕವನ್ನು(ಎಸಿ) ಬಳಸಿದರೆ ಅದರ ವೆಚ್ಚವನ್ನು ಪೋಷಕರೇ ಶುಲ್ಕದ ರೂಪದಲ್ಲಿ ವಿಧಿಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.

ಇಲ್ಲಿನ ಖಾಸಗಿ ಶಾಲೆಯೊಂದು ತರಗತಿಯಲ್ಲಿ ಎಸಿ ಬಳಕೆಗಾಗಿ ಪೋಷಕರಿಂದ ತಿಂಗಳಿಗೆ 2000 ರು. ಶುಲ್ಕ ವಸೂಲಿ ಮಾಡಿರುವುದನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಮನ್‌ಮೋಹನ್ ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ.

‘ಎಸಿ ವಿದ್ಯಾರ್ಥಿಗಳಿಗೆ ವಿಧಿಸುವ ಸೌಲಭ್ಯವಾಗಿದೆ. ಇದು ಪ್ರಯೋಗಾಲಯ ಶುಲ್ಕ ಸೇರಿದಂತೆ ಇತರ ಶುಲ್ಕಗಳಿಗಿಂತ ಭಿನ್ನವಾಗಿಲ್ಲ. ಇಂತಹ ಆರ್ಥಿಕ ವೆಚ್ಚವನ್ನು ಶಾಲೆಗಳು ಮಾತ್ರ ಭರಿಸಲು ಸಾಧ್ಯವಿಲ್ಲ. ಪೋಷಕರು ಶಾಲೆಗಳನ್ನು ಆಯ್ಕೆ ಮಾಡುವಾಗ ಅಲ್ಲಿನ ಸೌಲಭ್ಯ ಮತ್ತು ವೆಚ್ಚವನ್ನು ಗಮನಿಸಬೇಕು’ ಎಂದಿದ್ದಾರೆ.