ಅಚ್ಛೇ ದಿನ್ ಆದಾನಿ, ಅಂಬಾನಿಗೆ ಬಂದಿವೆ: ಸಚಿವ ಜಮೀರ್ ಅಹ್ಮದ್ ಟೀಕೆ

| Published : May 04 2024, 12:38 AM IST

ಅಚ್ಛೇ ದಿನ್ ಆದಾನಿ, ಅಂಬಾನಿಗೆ ಬಂದಿವೆ: ಸಚಿವ ಜಮೀರ್ ಅಹ್ಮದ್ ಟೀಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನ ಸತ್ಯಗಾರ್ಡನ್ನಲ್ಲಿ ವಸತಿ ಸಚಿವ ಜಮೀರ ಅಹ್ಮದ್ ಖಾನ್ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರುಪ್ರಧಾನಿ ನರೇಂದ್ರ ಮೋದಿ ಜನ್‌ ಧನ್ ಖಾತೆಗೆ ₹15 ಲಕ್ಷ ಅಲ್ಲ ₹15 ಪೈಸೆ ಹಾಕಿಲ್ಲ. ರೈತರ ಸಾಲಮನ್ನಾ ಮಾಡಿ ಎಂದರೆ ನಮ್ಮಲ್ಲಿ ನೋಟ್ ಪ್ರಿಂಟ್ ಮಷಿನ್ ಇಲ್ಲವೆಂದು ಹೇಳಿದ್ದರು. ಆದರೆ ಕಾರ್ಪೋರೇಟ್ ಕಂಪನಿಗಳ ₹16 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇವರ ಅಚ್ಛೇ ದಿನ್ ಅದಾನಿ-ಅಂಬಾನಿಗೆ ಬಂದಿವೆ ಹೊರತು ಬಡವರು, ರೈತರು, ಕಾರ್ಮಿಕರು, ಮಹಿಳೆಯರಿಗೆ ಬಂದಿಲ್ಲ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಟೀಕಿಸಿದರು.

ಸ್ಥಳೀಯ ಸತ್ಯಗಾರ್ಡನ್‌ನಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ನಗರದ 1 ರಿಂದ 31 ವಾರ್ಡ್‌ಗಳ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿ, ಬಿಜೆಪಿ ಕ್ಯಾನ್ಸರ್ ಇದ್ದಂತೆ. ಈಗಾಗಲೇ ಎರಡು ಬಾರಿ ಅಧಿಕಾರ ನಡೆಸಿ ಜನರ ಬದುಕನ್ನು ಹಾಳು ಮಾಡಿದೆ. ಈಗ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಸಂವಿಧಾನ ಮತ್ತು ದೇಶಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು.

ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ಪಾಷಾ, ಜಿಲ್ಲಾ ಅಧ್ಯಕ್ಷ ಮೌಲಾ ಫರೀದ್ಖಾನ್, ಮುಖಂಡರಾದ ಎಂ.ಕಾಳಿಂಗಪ್ಪ ವಕೀಲ, ಬಾಬಾರ್ಪಾಷಾ ಜಾಗೀರದಾರ್, ಸೈಯ್ಯದ್ ಜಾಫರ್ಅಲಿ ಜಾಗೀರದಾರ್, ಹಾರೂನ್ಪಾಷಾ ಜಾಗೀರದಾರ್, ಆರ್.ತಿಮ್ಮಯ್ಯ ನಾಯಕ, ಅಶೋಕ ಉಮಲೂಟಿ, ಫಾರೂಕ್ಸಾಬ ಖಾಜಿ ತುರ್ವಿಹಾಳ, ಬಸವರಾಜ ಹಿರೇಗೌಡ, ರಂಗನಗೌಡ ಗೊರೇಬಾಳ ಇದ್ದರು. ಅನಿಲಕುಮಾರ ನಿರೂಪಿಸಿದರು.