ಚುನಾವಣೆ ಕರ್ತವ್ಯಕ್ಕೆ ಸಂಭಾವನೆ ನೀಡಲು ಆಶಾ ಕಾರ್ಯಕರ್ತೆಯರ ಆಗ್ರಹ

| Published : May 06 2024, 12:38 AM IST

ಚುನಾವಣೆ ಕರ್ತವ್ಯಕ್ಕೆ ಸಂಭಾವನೆ ನೀಡಲು ಆಶಾ ಕಾರ್ಯಕರ್ತೆಯರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ತೇರದಾಳ: ಚುನಾವಣೆ ಸೇರಿದಂತೆ ಹಲವು ಕರ್ತವ್ಯಗಳಿಗೆ ಬಳಕೆಯಾಗುವ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಸಂಭಾವನೆ ನೀಡುವಂತೆ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದವರು ನಗರದಲ್ಲಿ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ,ತೇರದಾಳ(ರ-ಬ)

ಚುನಾವಣೆ ಸೇರಿದಂತೆ ಹಲವು ಕರ್ತವ್ಯಗಳಿಗೆ ಬಳಕೆಯಾಗುವ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಸಂಭಾವನೆ ನೀಡುವಂತೆ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದವರು ನಗರದಲ್ಲಿ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೆಳಗ್ಗೆ ೭ ರಿಂದ ಸಂಜೆ ೬ ಗಂಟೆಯವರೆಗೆ ಚುನಾವಣೆ ಕೆಲಸ, ಚುನಾವಣೆ ಪೂರ್ವ ಕೆಲಸಗಳಿಂದ ಹಿಡಿದು ಹಲವು ಸರ್ವೆಗಳಿಗೆ, ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲೂ ನಮ್ಮನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಆ ಕೆಲಸಕ್ಕೆ ಸೂಕ್ತ ಸಂಭಾವಣೆ ನೀಡುವುದಾಗಿ ಹೇಳಿರುವ ಅಧಿಕಾರಿಗಳು ಇಲ್ಲಿಯವರೆಗೆ ನೀಡಿಲ್ಲ. ಚುನಾವಣೆ ಕೆಲಸಕ್ಕೆ ನಮಗೆ ಸಂಭಾವನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಆಶಾ ಕಾರ್ಯಕರ್ತೆಯರು ನಿಯಮಿತ ಸೇವೆ ನೆಲೆಗಟ್ಟಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಡಿಮೆ ಗೌರವಧನ ಪಡೆದು ಕಾರ್ಯನಿರ್ವಹಿಸುತ್ತಿದ್ದೇವೆ. ಈ ಹಿಂದೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ₹ ೭೦೦ ಸಂಭಾವಣೆ ನೀಡಿದ್ದು, ಆರೋಗ್ಯ ಇಲಾಖೆಯ ಆಯುಕ್ತರು ಕೂಡ ಆರೋಗ್ಯ ಇಲಾಖೆ ಸೇವೆ ಹೊರತು ಪಡಿಸಿ ಬೇರೆ ಕೆಲಸಗಳಿಗೆ ಬಳಸಿಕೊಂಡಲ್ಲಿ ಜಿಲ್ಲಾಡಳಿತ ಸೂಕ್ತ ಸಂಭಾವನೆ ನೀಡುವಂತೆ ಆದೇಶಿಸಿದ್ದಾರೆ. ಸೂಕ್ತ ಸಂಭಾವನೆ ನೀಡಿದರೆ ಮಾತ್ರ ಲೋಕಸಭೆ ಚುನಾವಣೆ ಕರ್ತವ್ಯ ಮಾಡುತ್ತೇವೆ. ಇಲ್ಲದಿದ್ದರೆ ಚುನಾವಣೆ ಕೆಲಸಕ್ಕೆ ಹಾಜರಾಗುವುದಿಲ್ಲವೆಂದು ಎಚ್ಚರಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಅಂಜನಾ ಕುಂಬಾರ, ಕಾರ್ಯದರ್ಶಿ ಶೀಲಾ ಮೆಳ್ಳಿಗೇರಿ, ಮಂಜುಳಾ ಸರಿಕರ, ಸುನೀತಾ ಜಂಬಗಿ, ದಾನಮ್ಮ ವಜ್ಜರಮಟ್ಟಿ, ಚಿನ್ನವ್ವ ಗುಳಬಾಳ, ವಾಸಂತಿ ಪೂಜಾರಿ, ಶಿವಮ್ಮ ಜಾಲಾಪೂರ, ಬೌರವ್ವ ತುಪ್ಪದ, ಸವಿತಾ ತಳವಾರ, ಸುರೇಖಾ ಕಾಳೆ, ಅನುಸೂಯಾ ದಲಾಲ ಸೇರಿದಂತೆ ಹಲವು ಆಶಾ ಕಾರ್ಯಕರ್ತೆಯರು ಇದ್ದರು.