ಬಿಜೆಪಿ ಸಂಸದರ ಸಾಧನೆ ಶೂನ್ಯ: ಡಾ.ಪ್ರಭಾ ಮಲ್ಲಿಕಾರ್ಜುನ

| Published : May 06 2024, 12:31 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎಂಟು ಜನ ಶಾಸಕರಲ್ಲಿ ಏಳು ಜನ ಶಾಸಕರು ಕಾಂಗ್ರೆಸ್ ಪಕ್ಷದವರಾಗಿದ್ದು, ಆದರೆ ಕಾಂಗ್ರೆಸ್ ಪಕ್ಷದ ಸಂಸದರ ಕೊರತೆ ಎದ್ದು ಕಾಣುತ್ತಿದೆ.

ಹರಪನಹಳ್ಳಿ: ಕಳೆದ 25 ವರ್ಷದಿಂದ ಇಲ್ಲಿಯ ಲೋಕಸಭಾ ಸದಸ್ಯರ ಸಾಧನೆ ಶೂನ್ಯವಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭ ಮಲ್ಲಿಕಾರ್ಜುನ ಆರೋಪಿಸಿದರು.

ಪಟ್ಟಣದಲ್ಲಿ ಭರ್ಜರಿ ರೋಡ್‌ ಶೋ ಮೂಲಕ ಮತಯಾಚನೆ ಮಾಡಿ ಐ.ಬಿ. ವೃತ್ತದ ಬಹಿರಂಗಸಭೆಯಲ್ಲಿ ಮಾತನಾಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎಂಟು ಜನ ಶಾಸಕರಲ್ಲಿ ಏಳು ಜನ ಶಾಸಕರು ಕಾಂಗ್ರೆಸ್ ಪಕ್ಷದವರಾಗಿದ್ದು, ಆದರೆ ಕಾಂಗ್ರೆಸ್ ಪಕ್ಷದ ಸಂಸದರ ಕೊರತೆ ಎದ್ದು ಕಾಣುತ್ತಿದ್ದು, ಆ ಕೊರತೆಯನ್ನು ಈ ಬಾರಿ ನನಗೆ ಮತ ಹಾಕುವುದರ ಮೂಲಕ ನೀಗಿಸಬೇಕು ಎಂದು ಅವರು ಮತದಾರರಲ್ಲಿ ಕೋರಿದರು.

ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಕಳೆದ 11 ತಿಂಗಳಲ್ಲಿ ಹರಪನಹಳ್ಳಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಹರಪನಹಳ್ಳಿ ಪಟ್ಟಣಕ್ಕೆ ₹100 ಕೋಟಿ ಅನುದಾನ ತಂದಿದ್ದೇನೆ. ಅದರಲ್ಲಿ ಪಟ್ಟಣದ ಅಯ್ಯನಕೆರೆ ಸ್ವಚ್ಛತೆ ಸೇರಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಎನ್.ಕೊಟ್ರೇಶ್ ಮಾತನಾಡಿದರು.

ಇದಕ್ಕೂ ಪೂರ್ವದಲ್ಲಿ ಹರಿಹರ ವೃತ್ತದಿಂದ ಹೊಸಪೇಟೆ ರಸ್ತೆಯ ಮೂಲಕ ಪ್ರವಾಸಿ ಮಂದಿರ ವೃತ್ತದವರೆಗೂ ಬೃಹತ್ ಜನಸ್ತೋಮದೊಂದಿಗೆ ರೋಡ್ ಶೋ ನಡೆಸಿ, ಮತಯಾಚಿಸಲಾಯಿತು.

ಮೆರವಣಿಗೆಯಲ್ಲಿ ಮಹಾತ್ಮಗಾಂಧಿ ವೇಷಧಾರಿಯೊಬ್ಬ ಎಲ್ಲರ ಗಮನ ಸೆಳೆದರು. ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಕುಬೇರಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಲಕ್ಷ್ಮಿ, ಮುಖಂಡರಾದ ಎಚ್.ಎಂ. ಮಲ್ಲಿಕಾರ್ಜುನ, ಬೇಲೂರು ಅಂಜಪ್ಪ, ಶಶಿಧರ ಪೂಜಾರ, ಎಚ್.ಕೆ. ಹಾಲೇಶ್, ಆಲದಹಳ್ಳಿ ಷಣ್ಮುಖಪ್ಪ, ವಸಂತಪ್ಪ, ಪುರಸಭೆ ಸದಸ್ಯರಾದ ಟಿ.ವೆಂಕಟೇಶ್, ಲಾಟಿ ದಾದಾಪೀರ, ಜಾಕೀರ್ ಹುಸೇನ್, ಎಚ್.ಕೊಟ್ರೇಶ್, ಉದ್ದಾರ ಗಣೇಶ್, ಟಿ.ಎಚ್.ಎಂ. ಮಂಜುನಾಥ, ಹಲಗೇರಿ ಮಂಜಪ್ಪ, ದಂಡಿನ ಹರೀಶ್, ಮಲ್ಲಿಕಾರ್ಜುನ ಕಲ್ಮಠ, ಹುಲಿಕಟ್ಟಿ ಚಂದ್ರಪ್ಪ, ಮತ್ತೂರು ಬಸವರಾಜ ಇದ್ದರು.