ಬಿಜೆಪಿ ಬಡವರನ್ನು ನಿರ್ಮೂಲನೆ ಮಾಡತ್ತೆ: ಮಹದೇವಪ್ಪ

| Published : May 05 2024, 02:00 AM IST

ಬಿಜೆಪಿ ಬಡವರನ್ನು ನಿರ್ಮೂಲನೆ ಮಾಡತ್ತೆ: ಮಹದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ: ಬಡತನ ನಿರ್ಮೂಲನೆ ಕಾಂಗ್ರೆಸ್ ನಡೆಯಾದರೆ, ಬಡವರನ್ನೆ ನಿರ್ಮೂಲನೆ ಮಾಡುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ: ಬಡತನ ನಿರ್ಮೂಲನೆ ಕಾಂಗ್ರೆಸ್ ನಡೆಯಾದರೆ, ಬಡವರನ್ನೆ ನಿರ್ಮೂಲನೆ ಮಾಡುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಟೀಕಿಸಿದರು.

ಪಟ್ಟಣದ ವಿದ್ಯಾನಗರದ 2ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಮುಖಂಡ ರಾಜಶೇಖರ ಕೂಚಬಾಳ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಉಪಚುನಾವಣೆಯ ಸಮಯದಲ್ಲಿ ಇಲ್ಲಿಗೆ ಬಂದಾಗ ಜನರ ಕಷ್ಟಗಳನ್ನು ಆಲಿಸಿ ಹೋಗಿದ್ದೆ. ಸಚಿವನಾದ ನಂತರ ಕೊಳಚೆ ನಿರ್ಮೂಲನಾ ನಿಗಮದ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರಿಗೆ ಮಾತನಾಡಿ ಈ ಬಗ್ಗೆ ವಿವರಿಸಿದ್ದೆ. ಪ್ರಥಮ ಹಂತದ ಕೆಲ ಮನೆಗಳು ಪ್ರಾರಂಭವಾಗಿದ್ದು, ಇಂದಿನ ವಾತಾವರಣಕ್ಕೂ ವ್ಯತ್ಯಾಸ ಬಂದಿದೆ. ಇಂದು ಕಾಂಗ್ರೆಸ್ ಗ್ಯಾರಂಟಿಗಳು ನೀಡುವುದರ ಮುಖಾಂತರ ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಇಲ್ಲಿ ವಾಸವಿರುವ ಎಂಟನೂರು ಕುಟುಂಬಗಳಿಗೂ ಸುಸಜ್ಜಿತ ಮನೆ ಸಿಗಲು ಶ್ರಮವಹಿಸುತ್ತೇನೆ. ನೀವು ನಮ್ಮ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಬೆಂಬಲಿಸದಿದ್ದರೆ ನೀವುಗಳು ಜೀವನ ನಡೆಸುವುದು ಕಷ್ಟವಾಗಬಹುದು. ಬಾಬಾ ಸಾಹೇಬರ ಸಂವಿಧಾನಕ್ಕೂ ಕರಿನೆರಳು ಆವರಿಸುತ್ತೆ. ದಿ.ಇಂದಿರಾಗಾಂಧಿ ಅವರ ಬಗ್ಗೆ ಟೀಕಿಸುವ ಬಿಜೆಪಿಗರು ಅವರ ಗರೀಬಿ ಹಠಾವೋ ಘೋಷಣೆಯನ್ನು ಇಂದು ಗರೀಬೊಂಕೊ ಹಠಾವೋ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಶಾಸಕ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೆಸ್ ಬಡವರ, ದೀನ ದಲಿತರ, ಹಿಂದುಳಿದವರ ಪರವಾಗಿರುವ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಬಡ ಜನತೆಯ ಕಲ್ಯಾಣವಾಗುತ್ತದೆ. ಹೀಗಾಗಿ, ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು. ಮುಖಂಡ ರಾಜಶೇಖರ ಕೂಚಬಾಳ, ಕೆಪಿಸಿಸಿ ಸಂಯೋಜಕಿ ರುಕ್ಷನಾ ಉಸ್ತಾದ, ರಮೇಶ ಗುಬ್ಬೇವಾಡ, ಹಣಮಂತ ಸುಣಗಾರ, ರಾಜಶೇಖರ ಚೌರ, ಶರಣು ಶಿಂಧೆ, ಶರಣಪ್ಪ ಸುಲ್ಪಿ, ಶರಣಗೌಡ ಪಾಟೀಲ, ಗೋಲ್ಲಾಳ ಬಂಕಲಗಿ, ಅಂಬಿಕಾ ಪಾಟೀಲ, ಭಾರತಿ ಹೊಸಮನಿ ಇತರರು ಇದ್ದರು.