ಜಿಗಜಿಣಗಿ ಪರ ಬಿಜೆಪಿ ಕಾರ್ಯಕರ್ತರ ಪ್ರಚಾರ

| Published : May 05 2024, 02:06 AM IST

ಸಾರಾಂಶ

ವಿಜಯಪುರ: ಬಿಜೆಪಿ ೧೦ ವರ್ಷಗಳಿಂದ ಪೂರ್ಣ ಬಹುಮತದ ಸರ್ಕಾರ ನಡೆಸುತ್ತಿದೆ. ಆದರೆ ಒಂದು ಬಾರಿಯೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಕಾಂಗ್ರೆಸ್‌ನಂತೆ ತುರ್ತು ಪರಿಸ್ಥಿತಿ ಘೋಷಿಸಿಲ್ಲ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪುತ್ರ ರಾಮನಗೌಡ ಹೇಳಿದರು.ನಗರದ ಶಿವಶಕ್ತಿ ನಗರ, ಪಾಣಿ ನಗರ, ಸರಸ್ವತಿ ನಗರ, ಸಾಯಿಸಮರ್ಥ ನಗರ, ರಾಜರತ್ನ ಕಾಲನಿ, ಮಿಣಿಮಾದರ ಓಣಿ, ರಜಪೂತ ಗಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರ ಪರವಾಗಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ

ವಿಜಯಪುರ: ಬಿಜೆಪಿ ೧೦ ವರ್ಷಗಳಿಂದ ಪೂರ್ಣ ಬಹುಮತದ ಸರ್ಕಾರ ನಡೆಸುತ್ತಿದೆ. ಆದರೆ ಒಂದು ಬಾರಿಯೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಕಾಂಗ್ರೆಸ್‌ನಂತೆ ತುರ್ತು ಪರಿಸ್ಥಿತಿ ಘೋಷಿಸಿಲ್ಲ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪುತ್ರ ರಾಮನಗೌಡ ಹೇಳಿದರು.ನಗರದ ಶಿವಶಕ್ತಿ ನಗರ, ಪಾಣಿ ನಗರ, ಸರಸ್ವತಿ ನಗರ, ಸಾಯಿಸಮರ್ಥ ನಗರ, ರಾಜರತ್ನ ಕಾಲನಿ, ಮಿಣಿಮಾದರ ಓಣಿ, ರಜಪೂತ ಗಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರ ಪರವಾಗಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಅವರು ಮಾತನಾಡಿದರು.

ಮೋದಿ ನೇತೃತ್ವದ ಮತ್ತು ಅಮಿತ್ ಶಾ ಅವರ ಕೌಶಲ್ಯಪೂರ್ಣ ಮಾರ್ಗದರ್ಶನದ ಈ ಸರ್ಕಾರ ಪೂರ್ಣ ಬಹುಮತವನ್ನು ೩೭೦ನೇ ವಿಧಿಯನ್ನು ತೆಗೆದುಹಾಕಲು, ತ್ರಿವಳಿ ತಲಾಖ್ ರದ್ದುಗೊಳಿಸಲು, ಬ್ರಿಟಿಷರು ಮಾಡಿದ ಕಾನೂನುಗಳನ್ನು ಬದಲಾಯಿಸಲು, ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಲಾಕ್‌ಡೌನ್ ಹೇರಲು, ಸಿಎಎ ತರಲು ಮತ್ತು ಭಗವಾನ್ ಶ್ರೀರಾಮನ ಮಂದಿರ ನಿರ್ಮಾಣದ ಮಾರ್ಗವನ್ನು ಸುಗಮಗೊಳಿಸಲು ಬಳಸಿಕೊಂಡಿದೆ ಎಂದರು.

ಈ ವೇಳೆ ಮಹಾನಗರ ಪಾಲಿಕೆ ಸದಸ್ಯ ರಾಜೇಶ ದೇವಗಿರಿ, ರಾಜು ಕುರಿಯವರ, ಸ್ವಪ್ನಾ ಕಣಮಚನಾಳ, ವಿಠ್ಠಲ ಹೊಸಪೇಟಿ, ಚಿದಾನಂದ ಚಲವಾದಿ, ಶಂಕರ ನಾಟೀಕಾರ, ರಮೇಶ ಪಡಸಲಗಿ, ಉಮೇಶ ವೀರಕರ, ಬಸವರಾಜ ಗೊಳಸಂಗಿ, ಮನೋಜ ಜಿಗಜಿಣಗಿ, ಶ್ರೀಧರ ದೇವರ, ಅಶೋಕ ಬೆಲ್ಲದ, ಮಲ್ಲು ಗುಜರಿ, ಪ್ರಕಾಶ ತಾಳಿಕೋಟಿ, ವಿಠ್ಠಲ ಅಂಬಿಗೇರ, ಅರ್ಜುನ ಕಾಂಬಳೆ, ಗುರುಸ್ವಾಮಿ ಹಿರೇಮಠ, ಗಂಗಾಧರ ಹಿರೇಮಠ, ಇಂಚಗೇರಿ ಸರ್, ಇಂಡಿ ಸರ್, ಕಿರಣ ರಾಠೋಡ, ಸುನೀಲ ಚಲವಾದಿ ಮುಂತಾದವರು ಇದ್ದರು.