ನೀರನ್ನೇ ಹಾಸಿಗೆಯನ್ನಾಗಿಸಿ ಪವಡಿಸಿದ ಮಕ್ಕಳು

| Published : May 06 2024, 12:33 AM IST

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಕೇಶವ ಹಾಗೂ ಪತ್ನಿ ಅನುಷಾ ಬೇಸಿಗೆ ರಜೆಯಲ್ಲಿ ಮಕ್ಕಳು ಮನೆಯಲ್ಲಿ ಮೊಬೈಲ್ ಗೆ ಸೀಮಿತವಾಗದಿರಲಿ ಎಂದು ಆರೋಗ್ಯ ಹಾಗೂ ಸಂರಕ್ಷಣೆಯ ಕಲೆಗಳನ್ನು ಮಕ್ಕಳಿಗೆ ಹೇಳಿ ಕೊಡಲು ಮುಂದಾಗಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ / ಚಿಂತಾಮಣಿ

ನೀರಿನಲ್ಲಿ ಒಂದರ್ಧ ಗಂಟೆ ಈಜುವುದೇ ಕಷ್ಟದ ಕೆಲಸವಾಗಿರುತ್ತೆ ಅಂಥಾದ್ದರಲ್ಲಿ ಕೇವಲ 10 ದಿನಗಳಲ್ಲಿ ಈಜು ಕಲಿತಿರುವ 3 ವರ್ಷದ ಬಾಲಕಿ ನೀರನ್ನೇ ಹಾಸಿಗೆ ಮಾಡಿ ಒಂದು ಗಂಟೆ ಕಾಲ ನೀರಿನಲ್ಲಿ ಮಲಗಿ ಎಲ್ಲರನ್ನು ಅಚ್ಚರಿ ಮೂಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಕೇಶವ ಹಾಗೂ ಪತ್ನಿ ಅನುಷಾ ಬೇಸಿಗೆ ರಜೆಯನ್ನು ಮಕ್ಕಳು ಮನೆಯಲ್ಲಿ ಮೊಬೈಲ್ ಗೆ ಸೀಮಿತವಾಗದೇ ಆರೋಗ್ಯ ಹಾಗೂ ಸಂರಕ್ಷಣೆಯ ಕಲೆಗಳಾದ ಹಲವು ವಿಚಾರಗಳ ಬಗ್ಗೆ ಮಕ್ಕಳಿಗೆ ಹೇಳಿ ಕೊಡಲು ಮುಂದಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ 10 ವರ್ಷಗಳಿಂದ ಕೇಶವ ಮಾಸ್ಟರ್ ಡ್ಯಾನ್ಸ್,ಯೋಗ ಜೊತೆಗೆ ಕೇವಲ10 ದಿನಗಳಲ್ಲಿ ಈಜು ಕಲಿಸಲು ಮುಂದಾಗಿದ್ದು ಹೊಸ ದಾಖಲೆ ಬರೆಯಲು ಸಿದ್ಧತೆ ನಡೆಸಿದ್ದಾರೆ. ನೀರಿನ ಮೇಲೆ ಶವಾಸನ

ಮೂರು ವರ್ಷದ ಓರ್ವ ಬಾಲಕಿ ಖರಾಯಿನ್ ತನ್ನ ಸಾಹಸವನ್ನು ತೋರಿ ಎಲ್ಲರನ್ನು ಅಚ್ಚರಿ ಪಡಿಸಿದ್ದಾಳೆ. ಇನ್ನೂ ಖುರಾಯಿನ್ ತಂದೆ ಅಂಜು ದಂಪತಿಗಳು ಜೀವನಕ್ಕಾಗಿ ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವನವನ್ನು ಕಳೆಯುತ್ತಿದ್ದಾರೆ. ಆದರೆ ತಮ್ಮ ಮಗಳು ಮೊಬೈಲ್ ಗೆ ಸೀಮಿತವಾಗದೇ ಬೇಸಿಗೆ ರಜೆಯ ದಿನಗಳನ್ನು ಕಳೆಯಲು ಈಜು ಕಲಿಕರ ತರಬೇತಿ ಶಿಬಿರಕ್ಕೆ ಸೇರಿಸಿದ್ದು ಅದರಂತೆ ಮೂರು ವರ್ಷದ ಮಗು ಖುರಾಯಿನ್ ಒಂದು ಗಂಟೆಗೂ ಅಧಿಕ ಸಮಯ ನೀರಿನಲ್ಲಿ ಶವಾಸನ ಮಾಡುವ ಮೂಲಕ ಲಿಮ್ಕಾ ದಾಖಲೆ ಬರೆಯಲು ಮುಂದಾಗಿದ್ದಾಳೆ.

4ರಿಂದ 50 ವರ್ಷ ವಯಸ್ಸಿನವರು

ಕೇವಲ ಖುರಾಯಿನ್ ಮಾತ್ರವಲ್ಲದೇ 4 ವರ್ಷದ ಮಕ್ಕಳು ಸೇರಿದಂತೆ 50 ವರ್ಷದ ನಾಗರಿಕರು ಈಜು ಕಲಿಯಲು ಮುಂದಾಗಿ ಬಾವಿಯಲ್ಲಿ ಶವಾಸನ ಮಾಡುವ ಮೂಲಕ ಈಜು ಕಲಿಕೆಯ ಜೊತೆಗೆ ನೀರಿನಲ್ಲಿ ಯೋಗಾಸನ‌ ಮಾಡಿ ಬೇಸಿಗೆ ರಜೆ ದಿನಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.