ಬನ್ನಿ ಮತಗಟ್ಟೆಗೆ, ಹಕ್ಕು ಚಲಾಯಿಸಿ

| Published : May 07 2024, 01:00 AM IST

ಸಾರಾಂಶ

ಮತಗಟ್ಟೆಗೆ ತೆರಳಲು ೧೬೩ ಬಸ್, ೧೪೨ ಟೆಂಪೋ, ೭ ಮಿನಿ ಬಸ್, ೫೪ ಟ್ರಕ್, ೧೦೫ ಜೀಪ್ ವ್ಯವಸ್ಥೆಯನ್ನು ಮಾಡಲಾಗಿದೆ.

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ೧೯೭೭ಮತಗಟ್ಟೆಗಳಲ್ಲಿ ಮಂಗಳವಾರ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯಲಿದೆ. ನಿಯೋಜಿತ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ಮತಯಂತ್ರದೊಂದಿಗೆ ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಿಂದ ಸೋಮವಾರ ತೆರಳಿದರು.

ಮತಗಟ್ಟೆಗೆ ತೆರಳಲು ೧೬೩ ಬಸ್, ೧೪೨ ಟೆಂಪೋ, ೭ ಮಿನಿ ಬಸ್, ೫೪ ಟ್ರಕ್, ೧೦೫ ಜೀಪ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಾಹನಗಳಿಗೆ ನಿಗದಿತ ರೂಟ್ ಮ್ಯಾಪ್ ಮಾಡಲಾಗಿದ್ದು, ಆಯಾ ಮತಗಟ್ಟೆಗೆ ಅಧಿಕಾರಿಗಳನ್ನು, ಸಿಬ್ಬಂದಿಯನ್ನು ಸೋಮವಾರ ಬಿಟ್ಟು, ಮಂಗಳವಾರ ಸಂಜೆ ಮತದಾನ ಮುಗಿಯುತ್ತಿದ್ದಂತೆ ವಾಪಸ್ ಕರೆತರಲಾಗುತ್ತದೆ. ಕಣದಲ್ಲಿರುವ ಅಭ್ಯರ್ಥಿಗಳು: ಕಾಂಗ್ರೆಸ್‌ನಿಂದ ಡಾ. ಅಂಜಲಿ ನಿಂಬಾಳ್ಕರ್, ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದಿಂದ ಗಣಪತಿ ಹೆಗಡೆ, ಕರ್ನಾಟಕ ರಾಷ್ಟ್ರ ಸಮಿತಿಯ ವಿನಾಯಕ ಮಂಗೇಶ ನಾಯ್ಕ, ಉತ್ತಮ ಪ್ರಜಾಕೀಯ ಪಕ್ಷದಿಂದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾಗಿ ಕೃಷ್ಣಾಜಿ ಪಾಟೀಲ್, ಚಿದಾನಂದ ಹನುಮಂತಪ್ಪ ಹರಿಜನ, ನಿರಂಜನ್ ಉದಯಸಿನ್ಹಾ ಸರ್‌ದೇಸಾಯಿ, ನಾಗರಾಜ ಅನಂತ ಶಿರಾಲಿ, ಅರವಿಂದ ಗೌಡ, ಅವಿನಾಶ್ ನಾರಾಯಣ ಪಾಟೀಲ, ಕೃಷ್ಣ ಹನುಮಂತಪ್ಪ ಬಳೆಗಾರ, ರಾಜಶೇಖರ ಶಂಕರ ಹಿಂಡಲಗಿ.ಮತಗಟ್ಟೆಗೆ ತೆರಳಿದ ಅಧಿಕಾರಿಗಳು

ಶಿರಸಿ: ಲೋಕಸಭಾ ಚುನಾವಣೆಗೀಗ ಆಖಾಡ ಸಿದ್ಧವಾಗಿದೆ. ನಗರದ ಮಾರಿಕಾಂಬಾ ಪ್ರೌಢಶಾಲೆಯ ಆವರಣದಿಂದ ಸೋಮವಾರ ಮತಗಟ್ಟೆ ಅಧಿಕಾರಿಗಳು ಮತಪೆಟ್ಟಿಗೆಯೊಂದಿಗೆ ಮತದಾನ ಕಾರ್ಯಕ್ಕಾಗಿ ವಿವಿಧೆಡೆ ತೆರಳಿದರು.ಸೋಮವಾರ ಬೆಳಗ್ಗೆಯಿಂದಲೇ ಉಪವಿಭಾಗಾಧಿಕಾರಿ ಅಪರ್ಣಾ ರಮೇಶ ಅವರ ನೇತೃತ್ವದಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಒಟ್ಟೂ ೧೪೦೦ ಮತಗಟ್ಟೆ ಅಧಿಕಾರಿಗಳು ಶಿರಸಿ ಉಪವಿಭಾಗದ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ೫೦೦ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿ ಮತ್ತು ಅಧಿಕಾರಿಗಳ ಸಲುವಾಗಿ ೪೦ ಖಾಸಗಿ ಟೆಂಪೋ, ೨೪ ಜೀಪು ಹಾಗೂ ೨೬ ಸಾರಿಗೆ ಬಸ್‌ಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ.