ಕಬ್ಬಿನ ಬಿಲ್ ಪಾವತಿಸುವಂತೆ ರೈತರಿಂದ ಆಗ್ರಹ

| Published : May 17 2024, 12:40 AM IST / Updated: May 17 2024, 12:45 PM IST

ಸಾರಾಂಶ

ರೈತರು ಸಂಕಷ್ಟದಲ್ಲಿದ್ದು ಕಬ್ಬಿನ ಬಿಲ್ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಿಕೋಟಾದಲ್ಲಿ ತಹಸೀಲ್ದಾರ್ ಸುರೇಶ ಮುಂಜೆ ಅವರಿಗೆ ಮನವಿ ಸಲ್ಲಿಸಿದರು.

 ವಿಜಯಪುರ : ರೈತರು ಸಂಕಷ್ಟದಲ್ಲಿದ್ದು ಕಬ್ಬಿನ ಬಿಲ್ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಿಕೋಟಾದಲ್ಲಿ ತಹಸೀಲ್ದಾರ್‌ ಸುರೇಶ ಮುಂಜೆ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಾಧ್ಯಕ್ಷ ಸಾತಲಿಂಗಯ್ಯಾ ಸಾಲಿಮಠ ಮಾತನಾಡಿ, ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು ಕಳೆದ ಆರು ತಿಂಗಳುಗಳಿಂದ ಕಾರ್ಖಾನೆ ಮಾಲೀಕರು ಹಣ ಪಾವತಿಸದೇ ಸತಾಯಿಸುತ್ತಿದ್ದಾರೆ. ಇದರಿಂದ ರೈತರಿಗೆ ಹಣ ಬಾರದೇ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಜಮಖಂಡಿ ಶುಗರ್ಸ್‌, ಸಾಯಿಪ್ರೀಯಾ ಶುಗರ್ಸ್‌ ಅಲಬಾಳ, ಬಸವೇಶ್ವರ ಶುಗರ್ಸ್ ಕಾರಜೋಳ ಇನ್ನು ಹಲವು ಸಕ್ಕರೆ ಕಾರ್ಖಾನೆ ಸ್ಲೀಲಿಕರು ಕಬ್ಬಿನ ಬಿಲ್‌ನ್ನು ರೈತರಿಗೆ ಪಾವತಿಸಬೇಕಿದೆ. ಆದಷ್ಟು ಬೇಗನೆ ಬಿಲ್ ಪಾವತಿಸದಿದ್ದಲ್ಲಿ ಹೋರಾಟ, ರಸ್ತಾರೋಕೊ ಅನಿವಾರ್ಯವಾಗುತ್ತದೆ. ಇದಕ್ಕೆ ಆಸ್ಪದ ಕೊಡದೇ ರೈತರಿಗೆ ಅನೂಕೂಲ ಮಾಡಿಕೋಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಹೊನವಾಡ ಅಧ್ಯಕ್ಷ ಹನಮಂತ ಬ್ಯಾಡಗಿ, ಜಿಲ್ಲಾ ಸಂಚಾಲಕ ನಜೀರ ನಂದರಗಿ, ಕಲ್ಲಪ್ಪ ಮುಂಜಾನ, ಧರೆಪ್ಪ ಸೋರಡಿ, ಖಾದರ ವಾಲೀಕಾರ, ಎಸ್. ಎಸ್.ಎಚ್ಚಿ, ತಿಕೋಟಾ ಉಪಾಧ್ಯಕ್ಷ ಶಾನೂರ ನಂದರಗಿ ಸೇರಿದಂತೆ ಮುಂತಾದವರು ಇದ್ದರು.