ಡಾ.ಚಂದ್ರಶೇಖರ ಕಂಬಾರರು ಕನ್ನಡದ ಅಪ್ರತಿಮ ಸಾಧಕರು

| Published : May 07 2024, 01:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಯರಗಟ್ಟಿಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ, ಪರಂಪರೆಯನ್ನು ತಮ್ಮ ವಿಶಿಷ್ಟ ಬದುಕು ಬರಹದ ಮೂಲಕ ಅಭಿವ್ಯಕ್ತಪಡಿಸಿದ ಡಾ.ಚಂದ್ರಶೇಖರ ಕಂಬಾರರು ಕನ್ನಡದ ಅಪ್ರತಿಮ ಸಾಧಕರು ಎಂದು ಮಹಾಂತೇಶ ಮುದ್ದನ್ನವರ ಹೇಳಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ, ಪರಂಪರೆಯನ್ನು ತಮ್ಮ ವಿಶಿಷ್ಟ ಬದುಕು ಬರಹದ ಮೂಲಕ ಅಭಿವ್ಯಕ್ತಪಡಿಸಿದ ಡಾ.ಚಂದ್ರಶೇಖರ ಕಂಬಾರರು ಕನ್ನಡದ ಅಪ್ರತಿಮ ಸಾಧಕರು ಎಂದು ಮಹಾಂತೇಶ ಮುದ್ದನ್ನವರ ಹೇಳಿದರು.

ತಾಲೂಕಿನ ತಲ್ಲೂರ ಗ್ರಾಮದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯರಗಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸುವರ್ಣ ಕರ್ನಾಟಕ ಪ್ರಯುಕ್ತ ಆಯೋಜಿಸಿದ 6ನೇ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಬದುಕು- ಬರಹ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಕಂಬಾರರು ಕಥೆ, ಕವಿತೆ, ಕಾದಂಬರಿ ಮತ್ತು ನಾಟಕಗಳಲ್ಲಿ ಕನ್ನಡದ ದೇಶಿ ಸಂಸ್ಕೃತಿಯನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಎಂದು ಪ್ರತಿಪಾದಿಸಿದರು.

ಕನ್ನಡ ಸಾಹಿತ್ಯ ಪರಿಷತ್ತ ಯರಗಟ್ಟಿ ತಾಲೂಕು ಘಟಕದ ಅಧ್ಯಕ್ಷ ತಮ್ಮಣ್ಣ ಕಾಮಣ್ಣವರ ಮಾತನಾಡಿ, ಇಂದು ನಾವು ತಲೆ ಬಗ್ಗಿಸಿ ಪುಸ್ತಕ ಓದಿದರೇ ಮುಂದೆ ತಲೆ ಎತ್ತಿ ಜೀವಿಸುವಂತೆ ಪುಸ್ತಕ ಮಾಡುತ್ತದೆ. ಪ್ರತಿಯೊಬ್ಬರೂ ಕೂಡಾ ಪುಸ್ತಕ ಓದಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಮುಖ್ಯಶಿಕ್ಷಕ ಎ.ಎಂ.ಬಾಣದಾರ ಅಧ್ಯಕ್ಷತೆ ವಹಿಸಿದ್ದರು. ಡಾ.ಎನ್.ಎ.ಮುಲ್ಲಾ, ಆರ್.ಎಲ್.ಜೂಗನವರ, ಎಸ್.ಎಸ್.ಕುರುಬಗಟ್ಟಿಮಠ, ಭಾಸ್ಕರ ಹಿರೇಮೇತ್ರಿ, ಮಹಾರುದ್ರಪ್ಪ ಉಪ್ಪಿನ, ಡಾ.ರಾಜಶೇಖರ ಬಿರಾದಾರ, ಡಿ.ಡಿ.ಭೋವಿ, ಶಂಕರಗೌಡ ಪಾಟೀಲ, ಸಿ.ಎಂ.ಗಾಣಿಗೇರ, ಎಲ್.ವಿ.ಹಿರೇಮಠ, ಎಂ.ಎ.ಅತ್ತಾರ, ಈರಣ್ನ ಹೂಲ್ಲುರ ಸೇರಿದಂತೆ ಇತರರು ಇದ್ದರು.