ಇಂದಿನ ಪೀಳಿಗೆಗೆ ಕನ್ನಡ ಸ್ಪಷ್ಟವಾಗಿ ಕಲಿಸಿ: ಡಾ.ಸೋಮಶೇಖರ್

| Published : May 07 2024, 01:10 AM IST

ಇಂದಿನ ಪೀಳಿಗೆಗೆ ಕನ್ನಡ ಸ್ಪಷ್ಟವಾಗಿ ಕಲಿಸಿ: ಡಾ.ಸೋಮಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಕಂಪಿಸಬೇಕು.ನಮ್ಮ ಕೃತಿಗಳನ್ನು ಅನ್ಯಭಾಷೆಗೆ ತರ್ಜುಮೆ ಮಾಡುವಲ್ಲಿ ವಿಫಲರಾಗಿದ್ದೇವೆ.ಅಲ್ಲಮ ಪ್ರಭು ಇಂಗ್ಲೀಷ್ ಕವಿಯಾಗಿದ್ದಲ್ಲಿ ಜಾಗತಿಕ ಮಟ್ಟದ ಕವಿಯಾಗಿ ಪ್ರಸಿದ್ದವಾಗುತ್ತಿದ್ದರು ಎಂದ ಅವರು ಪ್ರಸ್ತುತ ಭಾಷೆ ಕಲಿಸುವುದು ಸವಾಲಾಗಿದೆ.ಪೋಷಕರು ಲಾಭದ ಭಾಷೆ ಕಲಿಸಲು ಮುಂದಾಗಿದ್ದಾರೆ.ಆದರೆ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಕಲಿಸುವ ಅಗತ್ಯತೆ ಇದೆ.ಕನ್ನಡ ಭಾಷೆ ಕರುಳು ಭಾಷೆಯಾಗಬೇಕು.ಕನ್ನಡ ಭಾಷೆ ಸಾಹಿತ್ಯ ಬೆಳೆಸಲು ಹೆಚ್ಚು ಅಧ್ಯಯನ ಕೇಂದ್ರಗಳು ಆರಂಭವಾಗಬೇಕು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಅನ್ಯಭಾಷೆ ಆಕ್ರಮಣದ ಮಧ್ಯೆ ಕನ್ನಡ ಭಾಷೆ ಬೆಳೆದು ನಿಂತಿದ್ದು, ಇಂದಿನ ಪೀಳಿಗೆಗೆ ಕನ್ನಡವನ್ನು ಸ್ಪಷ್ಟವಾಗಿ ಕಲಿಸುವ ಅಗತ್ಯವಿದೆ ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ.ಸೋಮಶೇಖರ್ ಶಿಮೊಗ್ಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೯ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಮೇಲೆ ಪಾಶ್ಚಿಮಾತ್ಯ ಭಾಷೆಯ ಆಕ್ರಮಣ ಅಗಿದೆ ಆದರೆ ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸಿವೆ. 1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ನಾಡು ಹಾಗೂ ಭಾಷೆ ಕಟ್ಟುವಲ್ಲಿ ಕೊಡುಗೆ ನೀಡಿದೆ. ಹಲವು ಕೃತಿಗಳನ್ನು ಹೊರ ತಂದಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳ ಮೂಲಕ ಕನ್ನಡ ಭಾಷೆಯನ್ನು ಬೆಳೆಸುವ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಕಂಪಿಸಬೇಕು.ನಮ್ಮ ಕೃತಿಗಳನ್ನು ಅನ್ಯಭಾಷೆಗೆ ತರ್ಜುಮೆ ಮಾಡುವಲ್ಲಿ ವಿಫಲರಾಗಿದ್ದೇವೆ.ಅಲ್ಲಮ ಪ್ರಭು ಇಂಗ್ಲೀಷ್ ಕವಿಯಾಗಿದ್ದಲ್ಲಿ ಜಾಗತಿಕ ಮಟ್ಟದ ಕವಿಯಾಗಿ ಪ್ರಸಿದ್ದವಾಗುತ್ತಿದ್ದರು ಎಂದ ಅವರು ಪ್ರಸ್ತುತ ಭಾಷೆ ಕಲಿಸುವುದು ಸವಾಲಾಗಿದೆ.ಪೋಷಕರು ಲಾಭದ ಭಾಷೆ ಕಲಿಸಲು ಮುಂದಾಗಿದ್ದಾರೆ.ಆದರೆ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಕಲಿಸುವ ಅಗತ್ಯತೆ ಇದೆ.ಕನ್ನಡ ಭಾಷೆ ಕರುಳು ಭಾಷೆಯಾಗಬೇಕು.ಕನ್ನಡ ಭಾಷೆ ಸಾಹಿತ್ಯ ಬೆಳೆಸಲು ಹೆಚ್ಚು ಅಧ್ಯಯನ ಕೇಂದ್ರಗಳು ಆರಂಭವಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಕಾ.ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು ಮಾತನಾಡಿ, 1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ ಪ್ರಸ್ತುತ ಲಕ್ಷಾಂತರ ಸದಸ್ಯರನ್ನು ಹೊಂದಿ ಹೆಮ್ಮರವಾಗಿ ಬೆಳೆದಿದೆ.ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ.ಕನ್ನಡ ಭಾಷೆ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.ಹಲ್ಮೀಡಿ ಶಾಸನಕ್ಕಿಂತ ಪುರಾತನ ಶಾಸನ ತಾಲೂಕಿನ ತಾಳಗುಂದ ಗ್ರಾಮದಲ್ಲಿ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ.ಕನ್ನಡ ನಾಡು ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕ.ಸಾ.ಪ ಅಧ್ಯಕ್ಷ ಎಚ್.ಎಸ್. ರಘು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಹಲವು ಕನ್ನಡ ಪರ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಸಕ್ರಿಯವಾಗಿ ಪಾಲ್ಗೊಂಡು ಪ್ರೋತ್ಸಾಹ ನೀಡಬೇಕು ಎಂದರು.

ಕಸಾಪ ಪದಾಧಿಕಾರಿ ಪಾರಿವಾಳ ಶಿವಲಿಂಗಪ್ಪ, ಕಾಶೀಬಾಯಿ, ನಂದಾ,ಮೋಹನ್ ರಾಜ್, ಲೋಕೇಶ್ ಮಕರಿ, ಪ್ರಕಾಶ್, ಜಿಯಾವುಲ್ಲಾ ಸದಸ್ಯ ಬಂಗಾರಪ್ಪ, ಶಿವಾನಂದಪ್ಪ, ದಿನೇಶ್ ಆಚಾರ್, ಸಂದೀಪ್, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.