ಕಾಂಗ್ರೆಸ್‌ ಅಭ್ಯರ್ಥಿ ಪರ ಸಚಿವ ರಾಮಲಿಂಗರೆಡ್ಡಿ ಮತಯಾಚನೆ

| Published : May 06 2024, 12:31 AM IST

ಕಾಂಗ್ರೆಸ್‌ ಅಭ್ಯರ್ಥಿ ಪರ ಸಚಿವ ರಾಮಲಿಂಗರೆಡ್ಡಿ ಮತಯಾಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ಮತಕ್ಷೇತ್ರದ ಉಪಚುನಾಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರ ಪರ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣದಲ್ಲಿ ಸುರಪುರ ಮತಕ್ಷೇತ್ರದ ಉಪಚುನಾಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರ ಪರ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

ಈ ಸಂದರ್ಭಲ್ಲಿ ಮಾತನಾಡಿದ ಅವರು, ಸುರಪುರ ಕ್ಷೇತ್ರದ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಸರಳ ವ್ಯಕ್ತಿತ್ವದ ರಾಜಕಾರಣಿ. 2013ರಲ್ಲಿ ನಮ್ಮ ಸರ್ಕಾರದ ಸಚಿವರಾಗಿದ್ದ ಸಂದರ್ಭದಲ್ಲಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಬಸ್ ನಿಲ್ದಾಣ ಹಾಗೂ ಅನೇಕ ಜನಪರ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. 2023ರಲ್ಲಿ ಅಧಿಕಾರಕ್ಕೆ ಬಂದ ತಿಂಗಳಲ್ಲೇ ನನಗೆ ಭೇಟಿಯಾಗಿ ಸುರಪುರ ಮತಕ್ಷೇತ್ರದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆಯಿಂದ 5 ಕೋಟಿ, ಹುಣಸಗಿಗೆ ಬಸ್ ಡಿಪೋ ಕೇಳಿದ್ದರು.

ನಾನೂ ಸಹ ಅವರಿಗೆ ಇಲ್ಲ ಅಂದಿಲ್ಲ. ಇಂತಹ ಅಪರೂಪದ ರಾಜಕಾರಣಿಯನ್ನು ಕಳೆದುಕೊಂಡ ಈ ಕ್ಷೇತ್ರ ನಿಜವಾಗಲು ಬಡವಾಗಿದೆ. ಅವರ ಸ್ಥಾನ ತುಂಬಲು ಮಗನಾದ ರಾಜಾ ವೇಣುಗೋಪಾಲ ನಾಯಕರ ಮೇಲೆ ಆಶೀರ್ವಾದ ಇರಲಿ. ಮುಂದೆ ಸುರಪುರ ಮತಕ್ಷೇತ್ರದ ಅಭಿವೃದ್ಧಿಗೆ ರಾಜಾ ವೆಂಕಟಪ್ಪ ನಾಯಕರಿಗೆ ಸಹಕರಿಸಿದಂತೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಾಜಶೇಖರಗೌಡ ಪಾಟೀಲ್, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಶರಣು ದಂಡಿನ್, ಚಂದ್ರಶೇಖರ ದಂಡಿನ್, ಬಸವರಾಜ ಸಜ್ಜನ್, ಬಸವರಾಜ ಬಳಿ, ಆರ್.ಎಂ. ರೇವಡಿ, ರವಿ ಮಲಗಲದಿನ್ನಿ, ಮಲ್ಲಪ್ಪ ಕಟ್ಟಿಮನಿ, ಬಾಬುಗೌಡ ಹಗರಟಗಿ ಸೇರಿದಂತೆ ಇತರರಿದ್ದರು.