.ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಶಾಸಕ ಭೇಟಿ

| Published : May 06 2024, 12:31 AM IST

ಸಾರಾಂಶ

ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ಸರ್ಕಾರದಿಂದ ಕೊಡಿಸುವ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಹನೂರು

ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ಸರ್ಕಾರದಿಂದ ಕೊಡಿಸುವ ಭರವಸೆ ನೀಡಿದರು.

ತಾಲೂಕಿನ ಶ್ಯಾಗ್ಯ ಗ್ರಾಮದಲ್ಲಿ ಸಿಡಿಲಿನಿಂದ ತಮ್ಮ ಜೀವನಾದಾರವಾಗಿದ್ದ ಮೂರು ಎಮ್ಮೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ರೈತ ಮಹಿಳೆ ರತ್ನಮ್ಮ ಅವರ ಮನೆಗೆ ಭೇಟಿ ನೀಡಿದ ಶಾಸಕರು ಸಾಂತ್ವನ ಹೇಳಿ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಮತ್ತು ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಮರಿಮಂಗಲ ಗ್ರಾಮದಲ್ಲಿ ಮನೆ ಶೆಡ್ ಕಳೆದುಕೂಂಡುವರಿಗೆ ಸಾಂತ್ವನ :

ತಾಲೂಕಿನ ಮರಿಮಂಗಲ ಗ್ರಾಮದಲ್ಲಿ ಗಾಳಿ ಮಳೆ ಅಬ್ಬರಕ್ಕೆ ಹಾನಿಗೊಳಗಾಗಿರುವ ಪ್ರದೇಶಕ್ಕೂ ಶಾಸಕರು ಭೇಟಿ ನೀಡಿ ಪರಿಶೀಲಿಸಿ ವಿವಿಧ ಜಮೀನುಗಳಲ್ಲಿ ಬೆಳೆ ಹಾನಿ ಹಾಗೂ ಮನೆ ಶೆಡ್ ಕಳೆದುಕೂಂಡುವರಿಗೆ ಸಾಂತ್ವನ ಹೇಳಿ ಹಾನಿಯನ್ನು ಕಂಡು ಮರುಕ ವ್ಯಕ್ತಪಡಿಸಿ ಆದಷ್ಟು ಶೀಘ್ರದಲ್ಲಿ ಸರ್ಕಾರದಿಂದ ಸಿಗುವ ಪರಿಹಾರವನ್ನು ನೀಡಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.ಸತ್ತೇಗಾಲ ವಿವಿಧೆಡೆ ಹಾನಿ ಪ್ರದೇಶಕ್ಕೂ ಭೇಟಿ :

ಸತ್ತೇಗಾಲದ ಕೆಲ ಕಡೆ ರೈತರ ಜಮೀನುಗಳಲ್ಲಿ ಬೆಳೆಯಲಾಗಿದ್ದ ಬಾಳೆ ಸೇರಿ ವಿವಿಧ ಫಸಲು ನಾಶವಾಗಿರುವ ಜಮೀನುಗಳಿಗೆ ಮತ್ತು ಮನೆ ಹಾನಿಯಾಗಿರುವ ಸ್ಥಳಗಳಿಗೂ ಖುದ್ದು ಶಾಸಕರು ಭೇಟಿಯಾಗಿ ಪರಿಶೀಲನೆ ನೆಡೆಸಿದರು.

ಈ ವೇಳೆ ಮಾತನಾಡಿ, ಹಾನಿಯಾಗಿರುವ ಬೆಳೆಗಳಿಗೆ ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವರದಿ ನೀಡಲು ಸೂಚನೆ ನೀಡಲಾಗುವುದು ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಹೀಗಾಗಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳು ಹಾಳಾಗಿರುವ ಬಗ್ಗೆ ಸೂಕ್ತ ದಾಖಲಾತಿಗಳನ್ನು ಅಧಿಕಾರಿಗಳಿಗೆ ಮಾಹಿತಿ ನೀಡಿ ಪ್ರಕೃತಿ ವಿಕೋಪದಡಿ ಸಿಗುವ ಸೂಕ್ತ ಪರಿಹಾರ ಕಲ್ಪಿಸಿಕೂಡಲಾಗುವುದು ಎಂದರು. ಈ ವೇಳೆ ಹಿರಿಯ ಮುಖಂಡ ರವಿಕುಮಾರ್, ಮಂಜೇಶ್, ಡಿ.ಕೆ. ರಾಜು ಹಾಗೂ ಅನಿಲ್ ಮಣೆಗಾರ್,ಮುನಿಯ ನಾಯಕ, ಮುತ್ತುರಾಜು ಹಾಗೂ ಗ್ರಾಮಸ್ಥರಿದ್ದರು.