ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ: ರೂಪಾಲಿ

| Published : May 06 2024, 12:39 AM IST

ಸಾರಾಂಶ

ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ ಅಯೋಧ್ಯೆಯಲ್ಲಿ ಸೀತಾಮಾತೆ ಮೂರ್ತಿ ಇಲ್ಲ ಎನ್ನುತ್ತಾರೆ. ಅಲ್ಲಿ ಸ್ಥಾಪನೆ ಮಾಡಿರುವುದು ರಾಮಲಲ್ಲಾ ಮೂರ್ತಿಯಾಗಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.

ಕಾರವಾರ: ರಾಜ್ಯದಲ್ಲಿ ಮೊದಲ ಹಂತದಲ್ಲಿ ೧೪ ಕ್ಷೇತ್ರದಲ್ಲಿ ಚುನಾವಣೆ ಈಗಾಗಲೇ ನಡೆದಿದ್ದು, ಮೇ ೭ರಂದು ೨ನೇ ಹಂತ ನಡೆಯಲಿದೆ. ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸದೇ ನರೇಂದ್ರ ಮೋದಿ ವೈಯಕ್ತಿಕ ವಿಚಾರ ತಂದು ನಕಲಿ ವಿಡಿಯೋ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರೇ ರಾಹುಲ್ ಗಾಂಧಿಯವರ ನಾಯಕತ್ವ ಒಪ್ಪುತ್ತಿಲ್ಲ. ಚುನಾವಣಾ ಸಂದರ್ಭದಲ್ಲಿ ಅವರ ಹೆಸರು ಹೇಳಲು ಮುಂದಾಗುತ್ತಿಲ್ಲ. ಅವರ ಹೆಸರಿನಲ್ಲಿ ಚುನಾವಣೆಗೆ ಹೋಗಲು ಭಯಪಡುತ್ತಿದ್ದಾರೆ. ಯಾರ ನಾಯಕತ್ವದಲ್ಲಿ ಚುನಾವಣಾ ನಡೆಯುತ್ತದೆ ಎನ್ನುವುದು ಗೊಂದಲವಿದೆ. ಇಂಡಿಯಾ ಮೈತ್ರಿಕೂಟಕ್ಕೆ ಪ್ರಧಾನಿ ಯಾರು ಎಂದು ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಪಿಎಂ ರೋಜಗಾರ ಯೋಜನೆಯಲ್ಲಿ ೭.೫ ಲಕ್ಷ ಜನರಿಗೆ ಸರ್ಕಾರಿ ಕೆಲಸ ಸಿಕ್ಕಿದೆ. ಕೇಂದ್ರ ಸರ್ಕಾರ ಕಳೆದ ೧೦ ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ ಕಾಂಗ್ರೆಸ್‌ನ್ನು ಭಯಗೊಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ೧೦ ತಿಂಗಳಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ? ಭಗವಾಧ್ವಜ ಹಾರಿಸಿದರೆ ಕೇಸ್ ಹಾಕುತ್ತಾರೆ, ಹನುಮಾನ ಚಾಲಿಸ್ ಹೇಳಿದರೆ ಹಲ್ಲೆ ಮಾಡುತ್ತಾರೆ ಎಂದು ದೂರಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ ಅಯೋಧ್ಯೆಯಲ್ಲಿ ಸೀತಾಮಾತೆ ಮೂರ್ತಿ ಇಲ್ಲ ಎನ್ನುತ್ತಾರೆ. ಅಲ್ಲಿ ಸ್ಥಾಪನೆ ಮಾಡಿರುವುದು ರಾಮಲಲ್ಲಾ ಮೂರ್ತಿಯಾಗಿದೆ. ಬಾಲಕ ರಾಮನ ಮೂರ್ತಿ, ಯಾವ ಪ್ರತಿಮೆ ಮಾಡಿದ್ದಾರೆ ಎಂದು ಅವರಿಗೆ ಗೊತ್ತಿಲ್ಲ. ಸೀತಾಮಾತೆ ಇಲ್ಲ ಎನ್ನುತ್ತಾರೆ. ಅವರು ಕಲಿತವರು, ಶಾಸಕರಾಗಿದ್ದವರು ಎಂದು ಟೀಕಿಸಿದರು. ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ, ಮಾಜಿ ವಕ್ತಾರ ನಾಗರಾಜ ನಾಯಕ, ನಾಗೇಶ ಕುರ್ಡೇಕರ, ನಯನ ನೀಲಾವರ, ಕಿಶನ ಕಾಂಬ್ಳೆ ಇದ್ದರು.