ಪ್ರಸಾದ್ ನೈಜ ಅಂಬೇಡ್ಕರ್ ವಾದಿಯಾಗಿದ್ದರು:ಸಾಹಿತಿ ಬನ್ನೂರು ಕೆ. ರಾಜು

| Published : May 07 2024, 01:00 AM IST

ಸಾರಾಂಶ

ನಡೆ- ನುಡಿಗಳೆರಡರಲ್ಲೂ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅಳವಡಿಸಿ ಕೊಂಡು ಐದು ದಶಕಗಳ ಸುಧೀರ್ಘ ಕಾಲದ ಕರ್ನಾಟಕದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಶೋಷಿತರೆದೆಯ ಜೀವವಾಗಿದ್ದ ಅಪ್ರತಿಮ ದಲಿತ ನಾಯಕ ಹಿರಿಯ ರಾಜಕೀಯ ಮುತ್ಸದ್ಧಿ ವಿ. ಶ್ರೀನಿವಾಸ ಪ್ರಸಾದ್

ಕನ್ನಡಪ್ರಭ ವಾರ್ತೆ ಮೈಸೂರು

ನಡೆ- ನುಡಿಗಳೆರಡರಲ್ಲೂ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅಳವಡಿಸಿ ಕೊಂಡು ಐದು ದಶಕಗಳ ಸುಧೀರ್ಘ ಕಾಲದ ಕರ್ನಾಟಕದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಶೋಷಿತರೆದೆಯ ಜೀವವಾಗಿದ್ದ ಅಪ್ರತಿಮ ದಲಿತ ನಾಯಕ ಹಿರಿಯ ರಾಜಕೀಯ ಮುತ್ಸದ್ಧಿ ವಿ. ಶ್ರೀನಿವಾಸ ಪ್ರಸಾದ್ ಅವರು ನೈಜ ಅಂಬೇಡ್ಕರ್ ವಾದಿಯಾಗಿದ್ದರು ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.

ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇಂದು ಸೋಮವಾರ ನಡೆದ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಸಲ್ಲಿಸಿದ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಂಸ್ಕೃತಿ ಚಿಂತಕ ಕೆ. ರಘುರಾಮ್ ವಾಜಪೇಯಿ ಅವರು ಶ್ರೀನಿವಾಸ್ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನುಡಿ ನಮನ ಸಲ್ಲಿಸಿದರು. ಲೇಖಕಿ ಡಾ. ಲೀಲಾ ಪ್ರಕಾಶ್ ಮಾತನಾಡಿದರು. ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ರಾಜು ಅಧ್ಯಕ್ಷತೆ ವಹಿಸಿದ್ದರು. ಯುವ ನಾಯಕನಟ ಸುಪ್ರೀತ್, ಸಮಾಜ ಸೇವಕ ದೊರೆಸ್ವಾಮಿ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮೊದಲಾದವರು ಇದ್ದರು.