ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಿ

| Published : May 05 2024, 02:03 AM IST

ಸಾರಾಂಶ

ಹೋಬಳಿ ಮಟ್ಟದಲ್ಲಿ ಗೋಶಾಲೆ ಸ್ಥಾಪಿಸುವುದಕ್ಕೆ ಸರಕಾರ ಅನುಮತಿ ನೀಡಿದ್ದು, ತಮಗೆ ಎಲ್ಲೆಲ್ಲಿ ಅವಶ್ಯಕತೆ ಇದೆಯೂ ಅಲ್ಲಲ್ಲಿ ಗೋಶಾಲೆ ಸ್ಥಾಪಿಸುವಂತೆ ಸೂಚನೆ ನೀಡಿದರು, ಅಧಿಕಾರಿಗಳು ಮನೆ ಮನೆಗೆ ಭೇಟಿ ಮೇವಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಿ

ಕನ್ನಡಪ್ರಭ ವಾರ್ತೆ ಕೆಜಿಎಫ್ಬೇಸಿಗೆ ಅವಧಿಯ ಮೂರು ತಿಂಗಳು ಸವಾಲಾಗಿದ್ದು, ಜನ ಜಾನುವಾರುಗಳಿಗೆ ಕುಡಿವ ನೀರು ಮೇವು ಮತ್ತು ಉದ್ಯೋಗದ ವಿಷಯದಲ್ಲಿ ತಕ್ಷಣ ತಾಲೂಕು ಮಟ್ಟದ ಅಧಿಕಾರಿಗಳು ಸ್ಪಂದಿಸಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಉಪವಿಭಾಗಧಿಕಾರಿ ವೆಂಕಟಲಕ್ಷ್ಮೀ ತಿಳಿಸಿದರು.ಕೆಜಿಎಫ್ ತಾಲೂಕು ಕಚೇರಿಯಲ್ಲಿ ಬರ ನಿವರ್ಹಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೆಜಿಎಫ್ ತಾಲೂಕಿನ್ನು ಬರಪೀಡಿತ ತಾಲೂಕೆಂದು ಸರಕಾರ ಘೋಷಣೆ ಮಾಡಿದ್ದು, ಕುಡಿವ ನೀರಿನ ವಿಷಯದಲ್ಲಿ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಗೋಶಾಲೆ ಸ್ಥಾಪಿಸಲು ಸೂಚನೆ

ಹೋಬಳಿ ಮಟ್ಟದಲ್ಲಿ ಗೋಶಾಲೆ ಸ್ಥಾಪಿಸುವುದಕ್ಕೆ ಸರಕಾರ ಅನುಮತಿ ನೀಡಿದ್ದು, ತಮಗೆ ಎಲ್ಲೆಲ್ಲಿ ಅವಶ್ಯಕತೆ ಇದೆಯೂ ಅಲ್ಲಲ್ಲಿ ಗೋಶಾಲೆ ಸ್ಥಾಪಿಸುವಂತೆ ಸೂಚನೆ ನೀಡಿದರು, ಅಧಿಕಾರಿಗಳು ಮನೆ ಮನೆಗೆ ಭೇಟಿ ಮೇವಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಿ ಎಂದು ಪಶು ಇಲಾಖೆಯ ಅಧಿಕಾರಿಗಳು ತಿಳಿಸಿದರು. ಗೋಶಾಲೆಗಳಲ್ಲಿ ಉಳಿದುಕೊಳ್ಳುವ ರೈತರಿಗೆ ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿವ ನೀರಿನ ಅಬಾವ ಇರುವ ಕಡೆ ಕೊಳವೆ ಬಾವಿಗಳನ್ನು ಕೊರೆಸಿ ಜನರಿಗೆ ಕುಡಿವ ನೀರು ಕೊಡಬೇಕು, ಇನ್ನೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

74 ಕೊಳವೆಬಾವಿಗೆ ರೀ ಡ್ರಿಲ್ಲಿಂಗ್‌

ಗ್ರಾಮಾಂತರ ಪ್ರದೇಶದಲ್ಲಿ ಕುಡಿವ ನಿರಿಗಾಗಿ ೭೪ ಕೊಳವೆ ಬಾವಿಗಳಿಗೆ ರೀ ಡ್ರೀಲ್ ಮಾಡಲು ಆದೇಶ ನೀಡಿದೆ, ಈಗಾಗಲೇ ೩೨ ಕೊಳವೆ ಬಾವಿಗಳನ್ನು ರ್ರೀ ಡ್ರೀಲ್ ಮಾಡಲಾಗಿದ್ದು ಇನ್ನುಳಿದ ಕೊಳವೆಬಾವಿಗಳನ್ನು ೧೦ ದಿನಗಳ ಒಳಗೆ ರ್ರೀ ಡ್ರೀಲ್ ಮಾಡಲಾಗುವುದೆಂದು ಸಭೆಗೆ ತಾಪಂ ಅಧಿಕಾರಿ ರಾಜರಾಮ್ ತಿಳಿಸಿದರು.ಸಭೆಯಲ್ಲಿ ತಹಸೀಲ್ದಾರ್ ರಾಮಲಕ್ಷ್ಮಯ್ಯ, ನಗರಸಭೆ ಪೌರಾಯುಕ್ತ ಪವನ್‌ಕುಮಾರ್, ತಾಪಂ ಅಧಿಕಾರಿ ರಾಜರಾಮ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಾರೆಡ್ಡಿ ಇದ್ದರು.