ಟೀಮ್ ಲಿವರೇಜ್ ಗೆ 2 ವಿಕೆಟ್ ಗಳ ಜಯ

| Published : May 07 2024, 01:03 AM IST

ಸಾರಾಂಶ

ಸೋಮವಾರದ ಮೊದಲ ಪಂದ್ಯದಲ್ಲಿ ಎಂಟಿಬಿ ರಾಯಲ್ಸ್‌ ತಂಡದ ವಿರುದ್ಧ ಟೀಮ್‌ ಲಿವರೇಜ್‌ 2 ವಿಕೆಟ್‌ಗಳ ಜಯ ಸಾಧಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ‘ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್’ ಪಂದ್ಯಾವಳಿಯ ಸೋಮವಾರದ ಮೊದಲ ಪಂದ್ಯದಲ್ಲಿ ಎಂಟಿಬಿ ರಾಯಲ್ಸ್ ತಂಡದ ವಿರುದ್ಧ ಟೀಮ್ ಲಿವರೇಜ್ 2 ವಿಕೆಟ್ ಗಳ ಜಯ ಸಾಧಿಸಿದೆ.

ಟಾಸ್ ಗೆದ್ದ ಟೀಮ್ ಲಿವರೇಜ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎಂಟಿಬಿ ರಾಯಲ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್ ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಟೀಮ್ ಲಿವರೇಜ್ ತಂಡ 19.2 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆಲುವು ಸಾಧಿಸಿತು.

ಟೀಮ್ ಲಿವರೇಜ್ ತಂಡದ ಸಂಜು ಬೋಪಯ್ಯ ಅವರು 14 ರನ್ ಗಳನ್ನು ಗಳಿಸಿ, 29 ರನ್ ಗಳಿಗೆ 3 ವಿಕೆಟ್ ಗಳನ್ನು ಕಬಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಎರಡನೇ ಪಂದ್ಯದಲ್ಲಿ ಅಂಜಿಗೇರಿ ನಾಡ್ ತಂಡದ ವಿರುದ್ಧ ಕೊಡವ ಟ್ರೈಬ್ ತಂಡ 81 ರನ್‌ಗಳ ಜಯ ಸಾಧಿಸಿದೆ. ಟಾಸ್ ಗೆದ್ದ ಅಂಜಿಗೇರಿ ನಾಡ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಕೊಡವ ಟ್ರೈಬ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 196 ರನ್ ಗಳನ್ನು ಗಳಿಸಿತು. ಅಂಜಿಗೇರಿ ನಾಡ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 115 ರನ್ ಗಳನ್ನು ಸೇರಿಸಿ ಸೋಲು ಅನುಭವಿಸಿತು.

ಕೊಡವ ಟ್ರೈಬ್ ತಂಡದ ಆಯುಷ್ ಪೊನ್ನಪ್ಪ 54 ರನ್ ಗಳನ್ನು ದಾಖಲಿಸಿ, 1 ವಿಕೆಟ್ ನ್ನು ಪತನಗೊಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದುಕೊಂಡರು.