ಇಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಘಟಿಕೋತ್ಸವ

| Published : May 04 2024, 12:37 AM IST

ಇಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಘಟಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಯಳಂದೂರು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಹಾಗೂ ಕರುಣಾ ಟ್ರಸ್ಟ್ ಅಧ್ಯಕ್ಷೆ ಡಾ.ಎಚ್.ಸುದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಶಿಕ್ಷಣ ಸಂಸ್ಥೆಯ ಕುಲಾಧಿಪತಿ ಜಿ.ಎಚ್.ನಾಗರಾಜ್ ಅಧ್ಯಕ್ಷತೆವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ೧೪ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮ ಶನಿವಾರ ಬೆಳಗ್ಗೆ ೧೧ ಗಂಟೆಗೆ ಆರ್.ಎಲ್.ಜಾಲಪ್ಪ ಸಭಾಗಂಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಒಟ್ಟು ೩೨೧ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ ಹೇಳಿದರು.ನಗರದ ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಳಂದೂರು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಹಾಗೂ ಕರುಣಾ ಟ್ರಸ್ಟ್ ಅಧ್ಯಕ್ಷೆ ಡಾ.ಎಚ್.ಸುದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಶಿಕ್ಷಣ ಸಂಸ್ಥೆಯ ಕುಲಾಧಿಪತಿ ಜಿ.ಎಚ್.ನಾಗರಾಜ್ ಅಧ್ಯಕ್ಷತೆವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ ಎಂದರು.

ಕುಲಪತಿ ಡಾ.ಬಿ.ವೆಂಗಮ್ಮ, ಕುಲಸಚಿವ ಡಾ.ಡಿ.ವಿ.ಎಲ್.ಎನ್.ಪ್ರಸಾದ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಸಿ.ಮುನಿನಾರಾಯಣ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಚಿನ್ನದ ಪದಕ ವಿಜೇತರು

ಎಂಬಿಬಿಎಸ್ ಪೇಸ್-೧ ಮತ್ತು ೩ ಪಾರ್ಟ್-೨ ಪದವಿಯಲ್ಲಿ ಡಾ.ರಾಹೀಲ್ ಮಹಮದ್ ರಹಮತುಲ್ ೩ ಚಿನ್ನದ ಪದಕ. ಎಂಬಿಬಿಎಸ್ ಪೇಸ್-೧ರಲ್ಲಿ ಡಾ.ಚಿತ್ರಾ ತಿವಾರಿ ೧. ಎಂಬಿಬಿಎಸ್ ಪೇಸ್ ೧ ಮತ್ತು ೨ರಲ್ಲಿ ಡಾ.ಮೆನಾಲಿ ಉತ್ಪಲ ದಿಸಾನಾಯಕ್ ೨. ಎಂಎಸ್ಸಿ ಮೆಡಿಕಲ್ ಬ್ಯಾಬೋರೇಟರಿ ಟೆಕ್ನಾಲಜಿಯಲ್ಲಿ ಪಿ.ಪ್ರೀತಿ. ಎಂಎಸ್ಸಿ ಮಾಲೆಕ್ಯುಲರ್ ಬಯಾಜಲಿ ಮತ್ತು ಹ್ಯೂಮನ್ ಜೆನೆಟಿಕ್ಸ್ನಲ್ಲಿ ಎ.ಎಸ್.ಶ್ರಾವಣಿ. ಇಂಟಿಗ್ರೇಟೆಡ್ ಬಿಎಸ್ಸಿ, ಎಂಎಸ್ಸಿಯಲ್ಲಿ ಕೆ.ಸಿ.ಚಂದನ. ಬ್ಯಾಚುನಲ್ ಆಪ್ ಫಿಸಿಯೋಥೆರಪಿಯಲ್ಲಿ ಮೊಹಮದ್ ರಶೀದ್. ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸಸ್ನಲ್ಲಿ ೨. ಬಿಎಸ್ಸಿ ಪ್ರಥಮ ವರ್ಷದ ವಿ.ಮೋನಿಕಾ. ರಿಯಾ ಸಾಬು ತಲಾ ೧ ಚಿನ್ನದ ಪದಕ ಪಡೆದುಕೊಂಡಿದ್ದು, ಸಂಸ್ಥಾಪಕ ಅಧ್ಯಕ್ಷ ಆರ್.ಎಲ್.ಜಾಲಪ್ಪ ಅವರ ಹೆಸರಿನಲ್ಲಿ-೧೪ ಚಿನ್ನದ ಪದಕ ನೀಡಲಾಗುವುದು ಎಂದು ತಿಳಿಸಿದರು. ಸಂಸ್ಥೆಯ ಕುಲಪತಿ ಡಾ.ಬಿ.ವೆಂಗಮ್ಮ, ಕುಲಸಚಿವ ಡಾ.ಡಿ.ವಿ.ಎಲ್.ಎನ್.ಪ್ರಸಾದ್, ಪರೀ? ನಿಯಂತ್ರಣಾಧಿಕಾರಿ ಡಾ.ಸಿ.ಮುನಿನಾರಾಯಣ, ಡೀನ್ಗಳಾದ ಡಾ.ಪ್ರಭಾಕರ್, ಡಾ.ದಯಾನಂದ್, ಎಂಎಸ್ ಡಾ.ಕೃಷ್ಣಪ್ಪ ಇದ್ದರು.