ವಿನೋದ್ ರಾಜ್ ಗಡಿಪಾರು ಆದೇಶ ಹಿಂಪಡೆಯಿರಿ: ಸಂಸದ ಬಿ.ವೈ.ರಾಘವೇಂದ್ರ

| Published : May 07 2024, 01:03 AM IST

ವಿನೋದ್ ರಾಜ್ ಗಡಿಪಾರು ಆದೇಶ ಹಿಂಪಡೆಯಿರಿ: ಸಂಸದ ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ವಿನೋದ್ ರಾಜ್ ಅವರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಸಾಗರ ಉಪವಿಭಾಗಾಧಿಕಾರಿಗಳು ಅಲ್ಲಿನ ಶಾಸಕರ ಒತ್ತಾಯದ ಮೇರೆಗೆ ಬೀದರ್ ಜಿಲ್ಲೆಗೆ ಗಡಿಪಾರು ಮಾಡಿದ್ದಾರೆ. ಯಾರೋ ಒಸಿ ಬಿಡ್ಡರ್ ನಿಂದ ವಿನೋದ್ ರಾಜ್ ಹೆಸರನ್ನು ಬಲವಂತವಾಗಿ ಹೇಳುವಂತೆ ಹುನ್ನಾರ ಮಾಡಲಾಗಿದೆ. ಇದು ಅತ್ಯಂತ ಖಂಡನೀಯ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜೆಪಿ ಸಾಗರ ಘಟಕದ ಯುವ ಮೋರ್ಚಾದ ಅಧ್ಯಕ್ಷ ವಿನೋದ್ ರಾಜ್ ಗಡಿಪಾರು ಆದೇಶವನ್ನು ವಾಪಸ್ ಪಡೆಯವಂತೆ ಆಗ್ರಹಿಸಿ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ವಿನೋದ್ ರಾಜ್ ಅವರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಸಾಗರ ಉಪವಿಭಾಗಾಧಿಕಾರಿಗಳು ಅಲ್ಲಿನ ಶಾಸಕರ ಒತ್ತಾಯದ ಮೇರೆಗೆ ಬೀದರ್ ಜಿಲ್ಲೆಗೆ ಗಡಿಪಾರು ಮಾಡಿದ್ದಾರೆ. ಯಾರೋ ಒಸಿ ಬಿಡ್ಡರ್ ನಿಂದ ವಿನೋದ್ ರಾಜ್ ಹೆಸರನ್ನು ಬಲವಂತವಾಗಿ ಹೇಳುವಂತೆ ಹುನ್ನಾರ ಮಾಡಲಾಗಿದೆ. ಇದು ಅತ್ಯಂತ ಖಂಡನೀಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಇದೆಲ್ಲವೂ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಕುತಂತ್ರ. ಅವರು ಹಿಂದುಳಿದ ವರ್ಗದ ಮುಖಂಡರಾಗಿದ್ದರು. ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಶೋಷಣೆ ಮಾಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಕೂಡಲೇ ಗಡಿಪಾರು ಆದೇಶವನ್ನು ರದ್ದು ಮಾಡಿ ಅವರಿಗೆ ಮತದಾನ ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ, ಪ್ರಮುಖರಾದ ಎಸ್. ದತ್ತಾತ್ರಿ, ಸಂತೋಷ್ ಬಳ್ಳೆಕೆರೆ, ದಿವಾಕರ್ ಶೆಟ್ಟಿ, ಹರೀಶ್, ಐಡಿಯಲ್ ಗೋಪಿ ಮತ್ತಿತರರಿದ್ದರು.

-----