ದಾಹ ತೀರಿಸಿಕೊಳ್ಳಲು ನೀರಿಲ್ಲದೆ ಪ್ರಾಣಿಗಳ ಮೂಕರೋದನ

| Published : May 06 2024, 12:36 AM IST

ಸಾರಾಂಶ

ತಾಲೂಕಿನ ಹರಟಿ ಬಳಿಯಿರುವ ಅರಣ್ಯ ಪ್ರದೇಶದಿಂದ ಬೇತಮಂಗಲ ಮುಖ್ಯ ರಸ್ತೆಯ ಕೋಟಿಗಾನಹಳ್ಳಿ ಗೇಟ್ ಬಳಿ ಮಂಗಗಳು ರಸ್ತೆಗೆ ಬಂದು ಕುಡಿಯುವ ನೀರು ಹಾಗೂ ಆಹಾರಕ್ಕಾಗಿ ರಸ್ತೆಯಲ್ಲಿ ಸಂಚರಿಸುವವರನ್ನು ಪೀಡಿಸುತ್ತಿವೆ.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ೩೬ ರಿಂದ ೪೦ ಡಿಗ್ರಿ ವರೆಗೆ ತಾಪಮಾನವಿದ್ದು ಇಡೀ ಕೋಲಾರ ಜಿಲ್ಲೆ ತತ್ತರಿಸಿ ಹೋಗಿದೆ, ಬಿಸಿಲಿನ ತಾಪಮಾನದ ಜೊತೆಗೆ ಬಿಸಿ ಗಾಳಿ ಸಹ ಹೆಚ್ಚಾಗಿದೆ. ಜನರು ತಂಪುಪಾನೀಯ ಹಾಗೂ ನೆರಳಿದ ಹೊದಿಕೆಯಂತಿರುವ ಮರಗಳ ಆಶ್ರಯ ಪಡೆಯುತ್ತಿದ್ದಾರೆ. ಪ್ರಾಣಿಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ತಾಲೂಕಿನ ಹರಟಿ ಬಳಿಯಿರುವ ಅರಣ್ಯ ಪ್ರದೇಶದಿಂದ ಬೇತಮಂಗಲ ಮುಖ್ಯ ರಸ್ತೆಯ ಕೋಟಿಗಾನಹಳ್ಳಿ ಗೇಟ್ ಬಳಿ ಮಂಗಗಳು ರಸ್ತೆಗೆ ಬಂದು ಕುಡಿಯುವ ನೀರು ಹಾಗೂ ಆಹಾರಕ್ಕಾಗಿ ರಸ್ತೆಯಲ್ಲಿ ಸಂಚರಿಸುವವರನ್ನು ಪೀಡಿಸುತ್ತಿವೆ. ರಸ್ತೆಯಲ್ಲಿ ಓಡಾಡುವ ಒಂದಷ್ಟು ವಾಹನ ಸವಾರರು ಸೌತೇಕಾಯಿ ಬಿಸ್ಕೆಟ್ ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ನೀಡುತ್ತಾರೆ. ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ

ಅರಣ್ಯ ಇಲಾಖೆಯಿಂದ ಹೊಂಡಗಳನ್ನು ನಿರ್ಮಿಸಿ ವನ್ಯ ಜೀವಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಹಲವು ರೀತಿಯ ಯೋಜಗಳಿವೆ. ಆದರೆ ಬೇಸಿಗೆ ಪ್ರಾರಂಭವಾಗಿ ಮೂರು ತಿಂಗಳು ಕಳೆದರು ಅರಣ್ಯ ಪ್ರದೇಶದಲ್ಲಿರುವ ಹೊಂಡಗಳಿಗೆ ನೀರು ತುಂಬಿಸದೇ ವನ್ಯ ಜೀವಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕೆಲಸ ಸಂಘ ಸಂಸ್ಥೆಗಳು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಮಾರ್ಚ್ ತಿಂಗಳಿಗಿಂತ ಮೇ ತಿಂಗಳಲ್ಲಿ ಸೂರ್ಯನ ಪ್ರಖರತೆ ಮತ್ತಷ್ಟು ಹೆಚ್ಚಾಗಿದೆ, ಪ್ರಾಣಿ ಪಕ್ಷಿಗಳು ಬಿರು ಬಿಸಿಲಿನ ಶಾಖಕ್ಕೆ ಬಸವಳಿಯುತ್ತಿವೆ ಬಿಸಿಲಿನ ಶಾಖಕ್ಕೆ ನಿಂತ್ರಾಣಗೊಳ್ಳುತ್ತಿರುವ ಪಕ್ಷಿಗಳು ಕುಡಿಯುವ ನೀರು ಸಿಗದೆ ಸಂಕಷ್ಟಕ್ಕೆ ಸಿಲುಕುತ್ತಿವೆ. ಮಳೆಯನ್ನೇ ಆಶ್ರಯಿಸಿರುವ ಕೋಲಾರ ಜಿಲ್ಲೆಯಲ್ಲಿ ಪ್ರಾಣಿ ಪಕ್ಷಿಗಳ ಸಂಕುಲ ಬೇಸಿಗೆ ಬೇಗೆಗೆ ಹನಿ ನೀರಿಗು ಪರಿತಪ್ಪಿಸುತ್ತಿವೆ. ಗ್ರಾಮೀಣ ಬಾಗದಲ್ಲಿ ಕೃಷ್ಟಿ ಹೊಂಡಗಳಲ್ಲಿ ರೈತರು ನೀರನ್ನು ತುಂಬಿಸಿರುವುದರಿಂದ ಪಕ್ಷಿಗಳಿಗೆ ಒಂದಷ್ಟು ಕುಡಿಯುವ ನೀರು ದೊರಕುತ್ತಿದ್ದರೂ ನಗರದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿಗೆ ಸಂಕಷ್ಟ ಎದುರಾಗಿದೆ. ನಗರದ ರಸ್ತೆ ಬದಿ ಇರುವ ಮರಗಳು ಹಾಗೂ ಉದ್ಯಾನವನ ಮನೆಗಳ ಮೇಲ್ಚಾವಣಿ ಸೇರಿದಂತೆ ಎಲ್ಲೆಲ್ಲಿ ಅವಕಾಶಗಳಿವೆಯೋ ಎಲ್ಲಾ ಕಡೆ ಬಟ್ಟಲುಗಳನ್ನು ಅಳವಡಿಸಿ ಪ್ರಾಣಿ ಪಕ್ಷಿಗಳ ದಾಹ ನೀಗಲು ಸಾರ್ವಜನಿಕರು ಮುಂದಾಗಬೇಕಿದೆ. ಬಿಸಿಲಿನ ತಾಪಮಾನ ಇದೇ ರೀತಿ ಮುಂದುವರೆದರೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಅಭಾವ ಮತ್ತಷ್ಟು ಬಿಗಾಡಾಯಿಸುವ ಆತಂಕ ಎದುರಾಗಿದ್ದು ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬಯಲು ಪ್ರದೇಶ ಹಾಗೂ ಅರಣ್ಯ ವ್ಯಾಪ್ತಿಯಲ್ಲಿ ಸಣ್ಣ ನೀರಿನ ಹೊಂಡಗಳನ್ನು ನಿರ್ಮಿಸಿ ಪ್ರಾಣಿ ಪಕ್ಷಿ ಸಂಕುಲಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. ಕೋಟ್....................ಪ್ರಾಣಿಗಳಿಗೆ ತಾಪಮಾನ ಹೆಚ್ಚಾದ್ದಲ್ಲಿ ಬಿಕ್ಕಳಿಸುವ ಮೂಲಕ ದೇಹದಲ್ಲಿರುವ ತಾಪಮಾನ ಹೊರಹಾಕುತ್ತವೆ, ವನ್ಯ ಜೀವಿಗಳು ಸಹ ಇದೇ ರೀತಿ ತಾಪಮಾನವನ್ನು ಬಾಯಿಯ ಮೂಲಕ ಹೊರಹಾಕುತ್ತವೆ, ಬಿಸಿಲಿನ ಬೇಗೆಯಲ್ಲಿ ನೀರು ಸಿಗದೇ ಹೃದಯಾಘಾತ, ಉಸಿರಾಟ ಸಮಸ್ಯೆ, ಹೃದಯ ಬಡಿತದಲ್ಲಿ ಏರುಪೇರಾಗಿ ಪ್ರಾಣಿ ಪಕ್ಷಿಗಳು ಸಾವಿಗಿಡಾಗುವ ಸಂಭವ ಹೆಚ್ಚಾಗಿದೆ. ಆದ್ದರಿಂದ ಸಾರ್ವಜನಿಕರು ಪ್ರಾಣಿ ಪಕ್ಷಿಗಳಿಗೆ ಸಾಧ್ಯವಾದಷ್ಟು ನೀರಿನ ವ್ಯವಸ್ಥೆ ಮಾಡುವುದು ಸೂಕ್ತ. - ಡಾ.ನಿತೀನ್ ಬಿ.ಎಸ್. ಪಶು ವೈದ್ಯ.