ಬ್ರಿಡ್ಜ್‌ಸ್ಟೋನ್‌ನ ಹೊಸ ಟೈಯರ್‌ ಲೋಕಾರ್ಪಣೆಗೊಳಿಸಿದ ಪಿ.ವಿ.ಸಿಂಧು

| Published : May 06 2024, 12:31 AM IST / Updated: May 06 2024, 04:26 AM IST

ಬ್ರಿಡ್ಜ್‌ಸ್ಟೋನ್‌ನ ಹೊಸ ಟೈಯರ್‌ ಲೋಕಾರ್ಪಣೆಗೊಳಿಸಿದ ಪಿ.ವಿ.ಸಿಂಧು
Share this Article
  • FB
  • TW
  • Linkdin
  • Email

ಸಾರಾಂಶ

ಟೈಯರ್‌ ಬಿಡುಗಡೆಗಾಗಿ ಕಂಪೆನಿ ವತಿಯಿಂದ ‘ಟ್ರೈಲ್‌ಬ್ಲೇಜಿಂಗ್ ವಿಥ್ ಡ್ಯುಯೆಲರ್ ಎ/ಟಿ’ ರೋಡ್ ಶೋ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಿಂಧು ಅವರು ಫ್ಲ್ಯಾಗ್‌ ಪ್ರದರ್ಶನದ ಮೂಲಕ ಚಾಲನೆ ಒದಗಿಸಿದರು.

ಬೆಂಗಳೂರು: ಪ್ರಸಿದ್ಧ ಟೈಯರ್‌ ತಯಾರಿಕ ಕಂಪೆನಿಯಾಗಿರುವ ಬ್ರಿಡ್ಜ್‌ಸ್ಟೋನ್‌ ಮಾರುಕಟ್ಟೆಗೆ ಹೊಸದಾಗಿ ಮೂರು ಟೈಯರ್‌ಗಳನ್ನು ಪರಿಚಯಿಸಿದೆ. ಇದರ ಭಾಗವಾಗಿ ನಡೆಯಲಿರುವ ರೋಡ್ ಶೋಗೆ ಕಂಪೆನಿಯ ರಾಯಭಾರಿ, 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಅವರು ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಚಾಲನೆ ನೀಡಿದರು.

ಟೈಯರ್‌ ಬಿಡುಗಡೆಗಾಗಿ ಕಂಪೆನಿ ವತಿಯಿಂದ ‘ಟ್ರೈಲ್‌ಬ್ಲೇಜಿಂಗ್ ವಿಥ್ ಡ್ಯುಯೆಲರ್ ಎ/ಟಿ’ ರೋಡ್ ಶೋ ನಡೆಯಲಿದೆ. 6 ರಾಜ್ಯಗಳಲ್ಲಿ ‘ಬ್ರಿಡ್ಜ್‌ಸ್ಟೋನ್’ನ ಡೀಲರ್‌ಗಳು ಮತ್ತು ಗ್ರಾಹಕರು ಏಕಕಾಲಕ್ಕೆ ಉತ್ಪನ್ನದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಿಂಧು ಅವರು ಫ್ಲ್ಯಾಗ್‌ ಪ್ರದರ್ಶನದ ಮೂಲಕ ಚಾಲನೆ ಒದಗಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬ್ರಿಡ್ಜ್ ಸ್ಟೋನ್ ಇಂಡಿಯಾದ ಚೀಫ್ ಮಾರ್ಕೆಟಿಂಗ್ ಮತ್ತು ಇನ್ನೊವೇಷನ್ ಆಫೀಸರ್ ದೀಪಕ್ ಗುಲಾಟಿ, ‘ಹೊಸ ಟೈಯರ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಈ ಮೊದಲಿನ ಟೈಯರ್‌ಗಳಿಗಿಂತ ಹೆಚ್ಚಿನ ಕಾರ್ಯಕ್ಷಮತೆ ಹೊಂದಿದೆ’ ಎಂದುಹೇಳಿದರು.

ಊಬರ್‌ ಕಪ್‌ನಲ್ಲಿ 16ನೇ ಬಾರಿ ಚೀನಾ ಚಾಂಪಿಯನ್‌ 

ಚೆಂಗ್ಡು(ಚೀನಾ): ಊಬರ್‌ ಕಪ್‌ ಮಹಿಳಾ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚೀನಾ 16ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿದ್ದ ಚೀನಾ, ಫೈನಲ್‌ನಲ್ಲಿ ಇಂಡೋನೇಷ್ಯಾವನ್ನು ಮಣಿಸಿತು. ಟೂರ್ನಿಯಲ್ಲಿ ಜಪಾನ್‌ 6, ಇಂಡೋನೇಷ್ಯಾ ಹಾಗೂ ಅಮೆರಿಕ ತಲಾ 3, ದ.ಕೊರಿಯಾ 2 ಬಾರಿ ಪ್ರಶಸ್ತಿ ಗೆದ್ದಿದೆ. ಭಾರತ ಈ ವರೆಗೂ ಫೈನಲ್‌ಗೇರಿಲ್ಲ.