ಭಾರತದ ಮೊದಲ ಹೈಬ್ರಿಡ್‌ ಕ್ರಿಕೆಟ್‌ ಪಿಚ್‌ ಧರ್ಮಶಾಲಾದಲ್ಲಿ ಅನಾವರಣ!

| Published : May 07 2024, 01:00 AM IST / Updated: May 07 2024, 04:11 AM IST

ಭಾರತದ ಮೊದಲ ಹೈಬ್ರಿಡ್‌ ಕ್ರಿಕೆಟ್‌ ಪಿಚ್‌ ಧರ್ಮಶಾಲಾದಲ್ಲಿ ಅನಾವರಣ!
Share this Article
  • FB
  • TW
  • Linkdin
  • Email

ಸಾರಾಂಶ

ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆಯ ಧರ್ಮಶಾಲಾ ಕ್ರೀಡಾಂಗಣದಲ್ಲಿ ಹೈಬ್ರಿಡ್‌ ಪಿಚ್‌ ಅಳವಡಿಕೆ. ನೆದರ್‌ಲೆಂಡ್ಸ್‌ನ ಸಂಸ್ಥೆಯಿಂದ ಪಿಚ್‌ ಅಳವಡಿಕೆ. 95% ನೈಸರ್ಗಿಕ ಟರ್ಫ್‌, 5% ಸಿಂಥೆಟಿಕ್‌ ಫೈಬರ್ ಬಳಕೆ. ಮೈದಾನ ಸಿಬ್ಬಂದಿಯ ಮೇಲಿನ ಹೊರೆ ಇಳಿಕೆ.

ಧರ್ಮಶಾಲಾ: ಭಾರತದ ಮೊದಲ ಹೈಬ್ರಿಡ್‌ ಕ್ರಿಕೆಟ್‌ ಪಿಚ್‌ ಅನ್ನು ಸೋಮವಾರ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ (ಎಚ್‌ಪಿಸಿಎ)ಯ ಕ್ರೀಡಾಂಗಣದಲ್ಲಿ ಅನಾವರಣಗೊಳಿಸಲಾಯಿತು. ನೆದರ್‌ಲೆಂಡ್ಸ್‌ ಮೂಲದ ಎಸ್‌ಐಎಸ್‌ ಸಂಸ್ಥೆಯು ಈ ಪಿಚ್‌ ಅಳವಡಿಕೆ ಮಾಡಿದ್ದು, ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್‌ ಪಿಚ್‌ ಅನಾವರಣಗೊಳಿಸಿದರು. 

‘ಹೈಬ್ರಿಡ್‌ ಪಿಚ್‌ಗಳ ಪರಿಚಯದಿಂದ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಯಾಗಲಿದೆ’ ಎಂದು ಧುಮಾಲ್‌ ಭರವಸೆ ವ್ಯಕ್ತಪಡಿಸಿದರು. ಹೈಬ್ರಿಡ್‌ ಪಿಚ್‌ಗಳು ಈಗಾಗಲೇ ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್‌ ಹಾಗೂ ದಿ ಓವಲ್‌ ಕ್ರೀಡಾಂಗಣಗಳಲ್ಲಿ ಬಳಕೆಯಾಗುತ್ತಿದೆ.

ಇತ್ತೀಚೆಗೆ ಟಿ20 ಹಾಗೂ ಏಕದಿನ ಪಂದ್ಯಗಳಿಗೆ ಹೈಬ್ರಿಡ್‌ ಪಿಚ್‌ಗಳ ಬಳಕೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಒಪ್ಪಿಗೆ ನೀಡಿತ್ತು. ಇಂಗ್ಲೆಂಡ್‌ನಲ್ಲಿ ಈ ವರ್ಷದಿಂದ 4 ದಿನಗಳ ಕೌಂಟಿ ಪಂದ್ಯಗಳಿಗೂ ಹೈಬ್ರಿಡ್‌ ಪಿಚ್‌ಗಳನ್ನು ಉಪಯೋಗಿಸಲಾಗುತ್ತದೆ.

ಏನಿದು ಹೈಬ್ರಿಡ್‌ ಪಿಚ್‌?

ಶೇ.95ರಷ್ಟು ನೈಸರ್ಗಿಕ ಟರ್ಫ್‌ ಜೊತೆಗೆ ಶೇ.5ರಷ್ಟು ಸಿಂಥೆಟಿಕ್‌ ಫೈಬರನ್ನು ಪಿಚ್‌ ಒಳಗೊಂಡಿರಲಿದೆ. ಹೈಬ್ರಿಡ್‌ ಪಿಚ್‌ ಸಾಮಾನ್ಯ ಪಿಚ್‌ಗಿಂತ ಹೆಚ್ಚು ಸಮಯ ಬಳಕೆಗೆ ಯೋಗ್ಯವಾಗಿರಲಿದ್ದು, ಚೆಂಡಿನ ಬೌನ್ಸ್‌ನಲ್ಲಿ ಏರುಪೇರು ಇರುವುದಿಲ್ಲ. ಇನ್ನು ಪಿಚ್‌ ಮೇಲಿನ ತೇವಾಂಶವನ್ನು ಅಗತ್ಯ ಎನಿಸಿದಷ್ಟು ಮಟ್ಟಕ್ಕೆ ಕಾಯ್ದುಕೊಳ್ಳಬಹುದು. ಇದರಿಂದ ಮೈದಾನ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಆಟದ ಗುಣಮಟ್ಟವೂ ಉತ್ತರವಾಗಿಲಿದೆ.