ಕೆನಡಾ ಪ್ರಧಾನಿ ಟ್ರುಡೋ ಭಾಗಿಯಾದ ಕಾರ್ಯಕ್ರಮದಲ್ಲಿ ಖಲಿಸ್ತಾನಿ ಘೋಷಣೆ

| Published : Apr 30 2024, 02:13 AM IST / Updated: Apr 30 2024, 04:13 AM IST

ಕೆನಡಾ ಪ್ರಧಾನಿ ಟ್ರುಡೋ ಭಾಗಿಯಾದ ಕಾರ್ಯಕ್ರಮದಲ್ಲಿ ಖಲಿಸ್ತಾನಿ ಘೋಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆನಡಾ ರಾಜಧಾನಿ ಟೋರಾಂಟೋದಲ್ಲಿ ಮತ್ತೆ ಭಾರತ ವಿರೋಧಿ ಹಾಗೂ ಖಲಿಸ್ತಾನಿ ಉಗ್ರರ ಪರ ಘೋಷಣೆ ಮೊಳಗಿದೆ. ಖಾಲ್ಸಾ ದಿನಾಚರಣೆ ಅಂಗವಾಗಿ ಭಾನುವಾರ ರಾಜಧಾನಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಭಾಗವಹಿಸಿದ್ದರು.

ಟೋರಾಂಟೋ: ಕೆನಡಾ ರಾಜಧಾನಿ ಟೋರಾಂಟೋದಲ್ಲಿ ಮತ್ತೆ ಭಾರತ ವಿರೋಧಿ ಹಾಗೂ ಖಲಿಸ್ತಾನಿ ಉಗ್ರರ ಪರ ಘೋಷಣೆ ಮೊಳಗಿದೆ. ಖಾಲ್ಸಾ ದಿನಾಚರಣೆ ಅಂಗವಾಗಿ ಭಾನುವಾರ ರಾಜಧಾನಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಭಾಗವಹಿಸಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಟ್ರುಡೋ, ‘ಸಿಖ್ಖರ ಮೌಲ್ಯಗಳೇ ನಮ್ಮ ಮೌಲ್ಯಗಳು ಎಂಬುದನ್ನು ನಾವು ಸದಾ, ಪ್ರತಿ ದಿನ ನೆನಪಿಡಬೇಕು ಮತ್ತು ಇಂಥ ದಿನಗಳು ನಮಗೆ ಅದನ್ನು ನೆನಪಿಸಬೇಕು. ಸತ್ಯ, ನ್ಯಾಯ, ಮುಕ್ತ ನಿಲುವುಗಳು, ಸೇವೆ ಸಿಖ್ಖರ ಮೌಲ್ಯದ ಕೇಂದ್ರಬಿಂದು. ಕೆನಡಾದಲ್ಲಿ ಸಿಖ್ಖರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ರಕ್ಷಿಸಲು ನಾವು ಸದಾ ಸಿದ್ಧ. ಜೊತೆಗೆ ಸಿಖ್ಖರ ಪ್ರಾರ್ಥನಾ ಕೇಂದ್ರಗಳಿಗೆ ಇನ್ನಷ್ಟು ಭದ್ರತೆ ನೀಡಲು ಸಿದ್ಧ ’ ಎಂದು ಭರವಸೆ ನೀಡಿದರು.

ಟ್ರುಡೋ ಭಾಷಣದುದ್ದಕ್ಕೂ ಸ್ಥಳದಲ್ಲಿ ನೆರೆದಿದ್ದ ಪ್ರತ್ಯೇಕತಾದಿ ಖಲಿಸ್ತಾನಿ ಬೆಂಬಲಿಗರು, ಖಲಿಸ್ತಾನಿ ಪರ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಈ ವೇಳೆ ಘೋಷಣೆ ಕೇಳಿ ಟ್ರುಡೋ ನಸುನಕ್ಕರು.

ಟ್ರುಡೋ ಹಿಂದಿನಿಂದಲೂ ಭಾರತ ವಿರೋಧಿ ಮತ್ತು ಖಲಿಸ್ತಾನಿಗಳ ಪರವಾದ ನಿಲುವಿನ ಮೂಲಕವೇ ಟೀಕೆಗೆ ಗುರಿಯಾಗಿದ್ದಾರೆ.