ಭಾರತ ಮಾರುಕಟ್ಟೆ ಪ್ರವೇಶ ಕುರಿತು ವಾರೆನ್‌ ಬಫೆಟ್‌ ಸುಳಿವು

| Published : May 07 2024, 01:00 AM IST / Updated: May 07 2024, 04:00 AM IST

ಭಾರತ ಮಾರುಕಟ್ಟೆ ಪ್ರವೇಶ ಕುರಿತು ವಾರೆನ್‌ ಬಫೆಟ್‌ ಸುಳಿವು
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಮಾರುಕಟ್ಟೆ ಪ್ರವೇಶ ಮಾಡುವ ಕುರಿತು ವಾರೆನ್‌ ಬಫೆಟ್‌ ಸುಳಿವು ನೀಡಿದ್ದು, ಭಾರತದಲ್ಲಿ ಹೂಡಿಕೆಗೆ ಅಪಾರ ಅವಕಾಶವಿದೆ ಎಂಬುದಾಗಿ ಬಫೆಟ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತದಲ್ಲಿ ಹೂಡಿಕೆಗೆ ಅಪಾರ ಅವಕಾಶಗಳಿವೆ ಎಂದು ವಿಶ್ವದ ಅತ್ಯಂತ ಯಶಸ್ವಿ ಹೂಡಿಕೆದಾರರ ಪೈಕಿ ಒಬ್ಬರಾದ ವಾರೆನ್ ಬಫೆಟ್‌ (93) ಹೇಳಿದ್ದಾರೆ.

ಈ ಮೂಲಕ ಭಾರತದಲ್ಲೂ ಹೂಡಿಕೆ ಮಾಡುವ ಸುಳಿವು ನೀಡಿದ್ದಾರೆ.

ಇತ್ತೀಚೆಗೆ ಬಫೆಟ್‌ ಒಡೆತನದ ಬರ್ಕ್‌ಶೈರ್‌ ಕಂಪನಿಯ ವಾರ್ಷಿಕ ಸಭೆಯ ವೇಳೆ ಹೂಡಿಕೆದಾರರೊಬ್ಬರು, ಭಾರತದ ಮಾರುಕಟ್ಟೆ ಪ್ರವೇಶ ಕುರಿತ ಬರ್ಕ್‌ಶೈರ್‌ ಉದ್ದೇಶದ ಬಗ್ಗೆ ಪ್ರಶ್ನೆ ಕೇಳಿದಾಗ, ‘ಇದು ಅತ್ಯುತ್ತಮ ಪ್ರಶ್ನೆ. ಭಾರತದಂಥ ದೇಶಗಳಲ್ಲಿ ಹೂಡಿಕೆಗೆ ಅಪಾರ ಅವಕಾಶ ಇದೆ ಎಂದು ನನಗೆ ನಂಬುಗೆ ಇದೆ.

ಆದರೆ ಎಲ್ಲೆಲ್ಲಿ ಅವಕಾಶ ಇದೆ, ಅದು ನಮಗೆ ಲಾಭದಾಯಕವೇ ಎಂಬುದನ್ನು ನಮ್ಮ ಆಡಳಿತ ಮಂಡಳಿ ನಿರ್ಧರಿಸಬೇಕಿದೆ’ ಎಂದು ಹೇಳಿದ್ದಾರೆ.