ಮಾಣಿಕ್ಯಧಾರ ಬಳಿ ಕೇರಳ ಬಾಲಕಿ ಸಾವಿಗೆ ಟ್ವಿಸ್ಟ್‌?

Published : Apr 12, 2026, 07:45 AM IST
Chikkamagaluru forest Missing Girl Sreenanda

ಸಾರಾಂಶ

ಇಲ್ಲಿಗೆ ಸಮೀಪದ ಮಾಣಿಕ್ಯಧಾರ ಜಲಪಾತದ ಪಕ್ಕ 2 ಸಾವಿರ ಅಡಿಯ ಪ್ರಪಾತದಲ್ಲಿ ಶವವಾಗಿ ಪತ್ತೆಯಾದ ಕೇರಳ ಮೂಲದ ಬಾಲಕಿ ಶ್ರೀನಂದಾ (15) ಸಾವಿನ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಬಾಲಕಿ ಕೊನೆಯದಾಗಿ ತನ್ನ ಸ್ನೇಹಿತೆಯೊಂದಿಗೆ ಮೊಬೈಲ್‌ನಲ್ಲಿ ಸುಮಾರು 15 ನಿಮಿಷ ಮಾತನಾಡಿದ್ದು ತನಿಖೆ ವೇಳೆ ಕಂಡು ಬಂದಿದೆ

 ಚಿಕ್ಕಮಗಳೂರು :  ಇಲ್ಲಿಗೆ ಸಮೀಪದ ಮಾಣಿಕ್ಯಧಾರ ಜಲಪಾತದ ಪಕ್ಕ 2 ಸಾವಿರ ಅಡಿಯ ಪ್ರಪಾತದಲ್ಲಿ ಶವವಾಗಿ ಪತ್ತೆಯಾದ ಕೇರಳ ಮೂಲದ ಬಾಲಕಿ ಶ್ರೀನಂದಾ (15) ಸಾವಿನ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. 

ಮೊಬೈಲ್‌ನಲ್ಲಿ ಸುಮಾರು 15 ನಿಮಿಷ ಮಾತನಾಡಿದ್ದು ಬೆಳಕಿಗೆ

 ಬಾಲಕಿ ಕೊನೆಯದಾಗಿ ತನ್ನ ಸ್ನೇಹಿತೆಯೊಂದಿಗೆ ಮೊಬೈಲ್‌ನಲ್ಲಿ ಸುಮಾರು 15 ನಿಮಿಷ ಮಾತನಾಡಿದ್ದು ತನಿಖೆ ವೇಳೆ ಕಂಡು ಬಂದಿದ್ದು, ‘ಜಾಸ್ತಿ ಮೊಬೈಲ್‌ ನೋಡಬೇಡ’ ಎಂದು ಅಪ್ಪ ಬುದ್ಧಿವಾದ ಹೇಳಿದ್ದಕ್ಕೆ ಆತ್ಮ*ತ್ಯೆ ಮಾಡಿಕೊಂಡಳಾ? ಎಂಬ ಸಂಶಯ ಪೊಲೀಸರನ್ನು ಕಾಡುತ್ತಿದೆ.

ಕೊನೆಯ ಕ್ಷಣಗಳಲ್ಲಿ ಆಕೆ ತನ್ನ ಸ್ನೇಹಿತೆಯೊಂದಿಗೆ ಸುಮಾರು ಹದಿನೈದು ನಿಮಿಷಗಳ ಕಾಲ ಸಂಭಾಷಣೆ ನಡೆಸಿದ್ದಾಳೆ ಎಂಬ ಮಾಹಿತಿ ಪೊಲೀಸರ ತನಿಖೆ ವೇಳೆ ಹೊರಬಿದ್ದಿದೆ. ಮೊಬೈಲ್ ಬಳಕೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ತಂದೆ ತನ್ನ ಮಗಳಿಗೆ ಬುದ್ದಿಮಾತು ಹೇಳಿದ್ದರು ಎಂಬ ವಿಷಯ ಕೂಡ ಶ್ರೀನಂದಾ ಕುಟುಂಬದ ಮೂಲಗಳಿಂದ ಲಭ್ಯವಾಗಿದೆ. ತಂದೆಯ ಗದರಿಕೆಯಿಂದ ಮನಸ್ಸಿಗೆ ಬೇಸರ ಮಾಡಿಕೊಂಡು ಬಾಲಕಿ ಅತಿ ಎತ್ತರದ ಪ್ರದೇಶದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕುಟುಂಬಸ್ಥರು ಅನುಮಾನ

ಇನ್ನೊಂದೆಡೆ, ಬಾಲಕಿ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಹೀಗಾಗಿ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿನ ನಿಜವಾದ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

PREV
Stay informed with the latest news from Chikkamagaluru district (ಚಿಕ್ಕಮಗಳೂರು ಸುದ್ದಿ) — covering local politics, coffee‑region updates, civic issues, environment, tourism, culture, crime and community affairs on Kannada Prabha News..
Read more Articles on

Recommended Stories

ಹೊಗರೇಹಳ್ಳಿ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿಗೆ ವೈಭವದ ಬ್ರಹ್ಮ ರಥೋತ್ಸವ
ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಫಲಿತಾಂಶ ಸುಧಾರಣೆ: ಕೆ.ಎಸ್.ಆನಂದ್ ಶ್ಲಾಘನೆ