ವೃತ್ತಿಪರ ವಿದೇಶಿ ಪೆಡ್ಲರ್‌ಗಳ ಬಂಧನ: 9 ಲಕ್ಷದ ಡ್ರಗ್ಸ್‌ ಜಪ್ತಿ

| Published : Oct 23 2024, 01:47 AM IST

ವೃತ್ತಿಪರ ವಿದೇಶಿ ಪೆಡ್ಲರ್‌ಗಳ ಬಂಧನ: 9 ಲಕ್ಷದ ಡ್ರಗ್ಸ್‌ ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಮೂವರು ವೃತ್ತಿಪರ ವಿದೇಶಿ ಪೆಡ್ಲರ್‌ಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಮೂವರು ವೃತ್ತಿಪರ ವಿದೇಶಿ ಪೆಡ್ಲರ್‌ಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಈ ಆರೋಪಿಗಳು ನೈಜೀರಿಯಾ ದೇಶದ ಪ್ರಜೆಗಳಾಗಿದ್ದು, ಕಾಡುಕೋಡಿಯಲ್ಲಿ ಸಮೀಪ ಅವರು ನೆಲೆಸಿದ್ದರು. ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ, ವಿದೇಶಿ ಪ್ರಜೆಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ₹9 ಲಕ್ಷ ಮೌಲ್ಯದ 82 ಗ್ರಾಂ ಎಂಡಿಎಂಎ ಸಮೇತ ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮೂವರು ವಿದೇಶಿ ಪೆಡ್ಲರ್‌ಗಳು ಪ್ರವಾಸ ವೀಸಾದಡಿ ಭಾರತಕ್ಕೆ ಬಂದಿದ್ದರು. ಮೊದಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಆರೋಪಿಗಳು, ನಂತರ ನಗರಕ್ಕೆ ಬಂದು ನೆಲೆಸಿದ್ದರು. ಹಲವು ದಿನಗಳಿಂದ ಡ್ರಗ್ಸ್ ದಂಧೆಯಲ್ಲಿ ಈ ವಿದೇಶಿ ಪ್ರಜೆಗಳು ತೊಡಗಿದ್ದು, ಕಳೆದ ವರ್ಷ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಬಳಿಕ ಜಾಮೀನು ಪಡೆದು ಹೊರಬಂದು ಮತ್ತೆ ತಮ್ಮ ಚಾಳಿ ಮುಂದುವರೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.+++ಆಫ್ರಿಕಾ ಮೂಲದ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಬಳಿಕ ನಗರದಲ್ಲಿ ದುಬಾರಿ ಬೆಲೆ ಮಾರುತ್ತಿದ್ದರು. ತಮ್ಮ ಪರಿಚಯಸ್ಥ ಗ್ರಾಹಕರಿಗಷ್ಟೇ ಅವರು ಡ್ರಗ್ಸ್ ಪೂರೈಸುತ್ತಿದ್ದರು. ಎಂಡಿಎಂಎ ತಲಾ ಕ್ರಿಸ್ಟಲ್‌ಗೆ 8 ರಿಂದ 10 ಸಾವಿರು ರು.ಕ್ಕೆ ಆರೋಪಿಗಳು ಮಾರುತ್ತಿದ್ದರು. ಈ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.