ಸಾರಾಂಶ
ಮಳವಳ್ಳಿ ತಾಲೂಕಿನ ಮಾದಹಳ್ಳಿಯ ಕೆಂಪೇಗೌಡರ ಪುತ್ರ ಸಂತೋಷ್ ಕುಮಾರ್ ಮೃತ ಯುವಕ. ಸಂತೋಷ್ ತಮ್ಮ ಬೈಕ್‌ನಲ್ಲಿ ಟಿ.ಕಾಗೇಪುರ ಕಡೆಯಿಂದ ಸ್ವಗ್ರಾಮ ಮಾದಹಳ್ಳಿಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಟಿ.ಕಾಗೇಪುರ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.ತಾಲೂಕಿನ ಮಾದಹಳ್ಳಿಯ ಕೆಂಪೇಗೌಡರ ಪುತ್ರ ಸಂತೋಷ್ ಕುಮಾರ್ (19) ಮೃತ ಯುವಕ. ಸಂತೋಷ್ ತಮ್ಮ ಬೈಕ್‌ನಲ್ಲಿ ಟಿ.ಕಾಗೇಪುರ ಕಡೆಯಿಂದ ಸ್ವಗ್ರಾಮ ಮಾದಹಳ್ಳಿಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಲಾಗಿದೆ. ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.ಪುರಸಭೆ ಮುಖ್ಯಾಧಿಕಾರಿ ಸಾವು
ಕೆ.ಆರ್.ಪೇಟೆ:ಪುರಸಭೆ ಮುಖ್ಯಾಧಿಕಾರಿ ರಾಜು.ಕೆ. ವಠಾರ (58) ಹೃದಯಾಘಾತದಿಂದ ಮಂಗಳವಾರ ಮಧ್ಯಾಹ್ನ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.
ಮೃತರು ಕಳೆದ 4 ತಿಂಗಳಿಂದ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಹೃದಯಾಘಾತಕ್ಕೆ ಒಳಗಾಗಿ ಕಳೆದ 4 ದಿನಗಳ ಹಿಂದೆ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆ.ಆರ್.ಪೇಟೆಗೆ ಬಂದಿದ್ದರು. ಇವರಿಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ.ಮೃತರು ಮೂಲತಃ ವಿಜಯಪುರ ಜಿಲ್ಲೆಯವರು. ಇವರ ಕುಟುಂಬ ಕೋಲಾರದಲ್ಲಿ ನೆಲೆಸಿತ್ತು. ಕೋಲಾರದಿಂದ ರಾಜು ವಠಾರ ಇತ್ತೀಚೆಗೆ ಕೆ.ಆರ್.ಪೇಟೆ ಪುರಸಭೆಗೆ ವರ್ಗಾವಣೆಯಾಗಿದ್ದರು.
ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಪುರಸಭೆ ಅಧ್ಯಕ್ಷೆ ಪಂಕಜ ಸೇರಿದಂತೆ ಸದಸ್ಯರು ಮತ್ತು ಸಿಬ್ಬಂದಿ ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.