ಬೈಕ್ ಸವಾರ ಆಯ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಣಸನಹಳ್ಳಿ ಬಳಿ ನಡೆದಿದೆ. ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿಯ ಕಾಳೇನಹಳ್ಳಿ ರಾಮಲಿಂಗೇಗೌಡರ ಪುತ್ರ ಮಂಜುನಾಥ (31) ಮೃತ ಪಟ್ಟ ಬೈಕ್ ಸವಾರ ಎಂದು ತಿಳಿದು ಬಂದಿದೆ.
ಶ್ರೀರಂಗಪಟ್ಟಣ:
ಬೈಕ್ ಸವಾರ ಆಯ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಣಸನಹಳ್ಳಿ ಬಳಿ ನಡೆದಿದೆ. ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿಯ ಕಾಳೇನಹಳ್ಳಿ ರಾಮಲಿಂಗೇಗೌಡರ ಪುತ್ರ ಮಂಜುನಾಥ (31) ಮೃತ ಪಟ್ಟ ಬೈಕ್ ಸವಾರ ಎಂದು ತಿಳಿದು ಬಂದಿದೆ. ಮೃತ ಯುವಕ ಕಾರ್ಯನಿಮಿತ್ತ ಕೊಡಿಯಾಲ ಗ್ರಾಮದಿಂದ ಹುಣಸನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಆಯ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅರಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಲೋಕಾಯುಕ್ತ ಅಧಿಕಾರಿಗಳ ದಾಳಿ: 1.92 ಕೋಟಿ ರು. ಹೆಚ್ಚುವರಿ ಆಸ್ತಿ ಸಂಪಾದನೆ ಪತ್ತೆ
ಮಂಡ್ಯ:ಪಿಆರ್‌ಇಡಿ ಸೂಪರ್ಡೆಂಟ್ ಭೈರೇಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದಾಗ ಆದಾಯಕ್ಕಿಂತ 1.92 ಕೋಟಿ ಹೆಚ್ಚುವರಿ ಆಸ್ತಿ ಸಂಪಾದನೆ ಮಾಡಿರುವುದು ಪತ್ತೆಯಾಗಿದೆ.
ಐದು ಕಡೆ ದಾಳಿ ನಡೆಸಿದ್ದ ಮಂಡ್ಯ ಲೋಕಾಯುಕ್ತ ಅಧಿಕಾರಿಗಳು ದಾಳಿ ವೇಳೆ 1.92 ಕೋಟಿ ಅಸಮಾತೋಲನ ಆಸ್ತಿ ಸಂಪಾದಿಸಿರುವುದು ಬಹಿರಂಗಗೊಂಡಿದೆ. ಮೈಸೂರಿನಲ್ಲಿ ಒಂದು ಸೈಟ್, ಮಂಡ್ಯದಲ್ಲಿ 2 ಸೈಟ್ ಸೇರಿದಂತೆ 4 ಸೈಟ್ ಹೊಂದಿರುವ ಭೈರೇಶ್ ಮೈಸೂರಿನ ಸೈಟ್ ದಾಖಲಾತಿ ಪಿಡಿಒ ಮಂಜುನಾಥ್ ಮನೆಯಲ್ಲಿ ಪತ್ತೆಯಾಗಿದೆ. 1.37 ಎಕರೆ ಜಮೀನು ಭೈರೇಶ್ ಹೆಸರಲ್ಲಿ ಖರೀದಿ ಮಾಡಿದ್ದು, 18 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆ ಪತ್ತೆಯಾಗಿದೆ. ಒಟ್ಟಾರೆ ಸಂಪಾದನೆಗಿಂತ 1.92 ಕೋಟಿ ಅಕ್ರಮ ಆಸ್ತಿ ಸಂಪಾದನೆ ಮಾಡಿರೋದು ಬೆಳಕಿಗೆ ಬಂದಿದೆ.ಶಿಂಷಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಜಾನುವಾರುಗಳ ರಕ್ಷಣೆ
ಮದ್ದೂರು: ಶಿಂಷಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಜಾನುವಾರುಗಳನ್ನು ಅಗ್ನಿಶಾಮಕ ದಳದ ತಂಡ ಹಾಗೂ ಪೊಲೀಸರ ನೆರವಿನಿಂದ ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿ ಎನ್.ಕೋಡಿಹಳ್ಳಿಯಲ್ಲಿ ಬುಧವಾರ ಸಂಜೆ ಜರುಗಿದೆ. ಗ್ರಾಮದ ಸುಶೀಲಮ್ಮರಿಗೆ ಸೇರಿದ ನಾಲ್ಕು ಹಸು ಹಾಗೂ ಒಂದು ಎಮ್ಮೆಯನ್ನು ಪ್ರವಾಹದಿಂದ ರಕ್ಷಣೆ ಮಾಡಲಾಗಿದೆ. ಶಿಂಷಾ ನದಿ ದಡದಲ್ಲಿ ಸುಶೀಲಮ್ಮ ತಮ್ಮ ಜಾನುವಾರುಗಳನ್ನು ಕಟ್ಟಿ ಹಾಕಿ ಮೇಯಲು ಬಿಟ್ಟು ಕೃಷಿ ಕೆಲಸಕ್ಕಾಗಿ ಜಮೀನಿಗೆ ತೆರಳಿದ್ದರು. ಈ ವೇಳೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ನದಿಯಲ್ಲಿ ಇದ್ದಕ್ಕಿದ್ದಂತೆ ಪ್ರವಾಹದಿಂದ ನೀರು ಹರಿದು ಬಂದಿದೆ. ಇದರಿಂದ ನದಿ ಪಕ್ಕದಲ್ಲಿದ್ದ ನಾಲ್ಕು ಹಸು ಒಂದು ಎಮ್ಮೆ ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಗುತ್ತಿದ್ದವು.ವಿಷಯ ತಿಳಿದ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಠಾಣಾಧಿಕಾರಿ ವಿಜಯ್ ಕುಮಾರ್, ಸಿಬ್ಬಂದಿ ಯಮನಪ್ಪ, ಮಾದೇಗೌಡ, ಉತ್ತಮ್ ಹಾಗೂ ವಿನಯ್ ಅವರ ತಂಡ ಬೆಸಗರಹಳ್ಳಿ ಪೊಲೀಸರ ನೆರವಿನಿಂದ ಬೋಟ್ ಸಹಾಯದಿಂದ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಜಾನುವಾರಗಳನ್ನು ರಕ್ಷಣೆ ಮಾಡಿದ್ದಾರೆ.