ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ನಗದು ಸೇರಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಲೂಟಿ

| Published : Oct 14 2024, 01:24 AM IST / Updated: Oct 14 2024, 05:19 AM IST

ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ನಗದು ಸೇರಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಲೂಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ಪಟ್ಟಣದ ಎಚ್.ಕೆ.ವೀರಣ್ಣಗೌಡನಗರದ (ಚನ್ನೇಗೌಡನದೊಡ್ಡಿ)ಯಲ್ಲಿನ ಲೇಟ್ ಉಮೇಶ್ ಪತ್ನಿ ಅಂಬಿಕಾರ ಅವರ ಮನೆ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ಬೀರುವಿನಲ್ಲಿದ್ದ 40 ಸಾವಿರ ನಗದು ಹಾಗೂ 6 ಲಕ್ಷ ರು. ವೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.

 ಮದ್ದೂರು : ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ನಗದು ಸೇರಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿರುವ ಘಟನೆ ಪಟ್ಟಣದಲ್ಲಿ ಶನಿವಾರ ಜರುಗಿದೆ.

ಪಟ್ಟಣದ ಎಚ್.ಕೆ.ವೀರಣ್ಣಗೌಡನಗರದ (ಚನ್ನೇಗೌಡನದೊಡ್ಡಿ)ಯಲ್ಲಿನ ಲೇಟ್ ಉಮೇಶ್ ಪತ್ನಿ ಅಂಬಿಕಾರ ಅವರ ಮನೆ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ಬೀರುವಿನಲ್ಲಿದ್ದ 40 ಸಾವಿರ ನಗದು ಹಾಗೂ 6 ಲಕ್ಷ ರು. ವೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.

ಪತಿ ಉಮೇಶ್‌ 17 ವರ್ಷದ ಹಿಂದೆ ನಿಧನರಾದ ನಂತರ ಅಂಬಿಕಾ ಕಾವೇರಿ ನೀರಾವರಿ ನಿಗಮದ ಮುಂಭಾಗದಲ್ಲಿ ಟೀ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ 20 ಗ್ರಾಂ ಚಿನ್ನದ ನಕ್ಲೇಸ್, ಎರಡು ಎಳೆ ಚಿನ್ನದ ಸರ, 10 ಗ್ರಾಂ ಚಿನ್ನದ ಸರ, ಎರಡು ಮುತ್ತಿನ ಓಲೆ, 3 ಗ್ರಾಂನ ಓಲೆ, ಎರಡು ಜುಮುಕಿ, ಮಣಿ ಸರ ಸೇರಿದಂತೆ ಒಟ್ಟು 86 ಗ್ರಾಂ ಚಿನ್ನಾಭರಣಗಳನ್ನು ಬ್ಯಾಂಕ್‌ನಿಂದ ಬಿಡಿಸಿಕೊಂಡು ಮನೆಯ ಅಲ್ಮೇರಾದಲ್ಲಿಟ್ಟಿದ್ದರು.

ಮಧ್ಯಾಹ್ನ 1.30ರ ಸಮಯದಲ್ಲಿ ಮನೆಗೆ ಬೀಗ ಹಾಕಿ, ಟೀ ಅಂಗಡಿ ವ್ಯಾಪಾರಕ್ಕೆ ಹೋಗಿದ್ದ ವೇಳೆ ಮನೆ ಬೀಗ ಮುರಿದ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ. ಆಕೆ ಮನೆಗೆ ಬಂದು ನೋಡಲಾಗಿ ಮನೆಯಲ್ಲಿ ಕಳವಾಗಿರುವ ಪ್ರಕರಣ ಬೆಳೆಕಿಗೆ ಬಂದಿದೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಪಿಐ ಶಿವಕುಮಾರ್, ಪಿಎಸ್‌ಐ ಮಂಜುನಾಥ್, ಅಪರಾಧ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.