ಸಾರಾಂಶ
ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ವಿವಾಹ ಉಮಾಪತಿ ಅವರೊಂದಿಗೆ ನಡೆದಿದೆ.
ಕನ್ನಡಪ್ರಭ ಸಿನಿವಾರ್ತೆ
ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿ ನಟಿ ಐಶ್ವರ್ಯ ಅರ್ಜುನ್, ಉಮಾಪತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈನ ಗೇರುಗಂಬಕ್ಕಂನಲ್ಲಿ ಅರ್ಜುನ್ ಸರ್ಜಾ ಕಟ್ಟಿಸಿರುವ ಹನುಮಂತನ ಆಲಯದಲ್ಲಿ ಈ ವಿವಾಹ ನಡೆದಿದೆ. ಎರಡೂ ಕುಟುಂಬಗಳ ಆಪ್ತರು ಪಾಲ್ಗೊಂಡಿದ್ದಾರೆ. ಜೂ.14ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿದ ಕನ್ನಡದ ‘ಪ್ರೇಮ ಬರಹ’ ಚಿತ್ರದಲ್ಲಿ ಐಶ್ವರ್ಯ ನಟಿಸಿದ್ದರು.