ಸಾರಾಂಶ
ನಟಿ ಅನುಷ್ಕಾ ಶೆಟ್ಟಿ ಹಾಗೂ ನಟ ಪ್ರಭಾಸ್ ಅವರ ಮದುವೆ ಚರ್ಚೆ ಮತ್ತೆ ಸದ್ದು ಮಾಡುತ್ತಿದೆ.
ಸಿನಿವಾರ್ತೆ
ಪ್ರಭಾಸ್ ಹಾಗೂ ನಟಿ ಅನುಷ್ಕಾ ಶೆಟ್ಟಿ ಮದುವೆ ಸಂಗತಿ ಮತ್ತೆ ಚರ್ಚೆಗೆ ಬಂದಿದೆ. ಇದಕ್ಕೆ ಕಾರಣ ಪ್ರಭಾಸ್ ಇನ್‌ಸ್ಟಾ ಗ್ರಾಮ್ ಪೋಸ್ಟ್ ಹಾಗೂ ಅನುಷ್ಕಾ ಶೆಟ್ಟಿ ಮಾತು. ‘ಡಾರ್ಲಿಂಗ್ಸ್, ಕೊನೆಗೂ ಯಾರೋ ತುಂಬಾ ವಿಶೇಷವಾದವರು ನಮ್ಮ ಜೀವನಕ್ಕೆ ಬರಲಿದ್ದಾರೆ. ವೇಯ್ಟ್ ಮಾಡಿ’ ಎಂದು ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಮದುವೆ ವಿಷಯ ಅಂತಲೇ ಅವರ ಅಭಿಮಾನಿಗಳು ಅಂದುಕೊಂಡಿದ್ದಾರೆ.
ಮತ್ತೊಂದು ಕಡೆ ನಟಿ ಅನುಷ್ಕಾ ಶೆಟ್ಟಿ, ‘ನಾನು ಮದುವೆ ಆಗುವವರು ಚಿತ್ರರಂಗಕ್ಕೆ ಸಂಬಂಧಿಸಿದವರೇ’ ಎಂದಿದ್ದಾರೆ ಎಂದು ತೆಲುಗು ಮಾಧ್ಯಮಕ್ಕೆ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.
ಮತ್ತೊಂದು ಕಡೆ ಅನುಷ್ಕಾ ಶೆಟ್ಟಿ ಕನ್ನಡದ ನಿರ್ಮಾಪಕನ ಜತೆಗೆ ಮದುವೆ ಆಗಲಿದ್ದಾರೆ. ಆ ನಿರ್ಮಾಪಕನ ವಯಸ್ಸು 42 ಎನ್ನುವ ಸುದ್ದಿಯೂ ಓಡಾಡುತ್ತಿದೆ.