ಸಾರಾಂಶ
ದರ್ಶನ್ ನಟನೆಯ ಡೆವಿಲ್ ಚಿತ್ರಕ್ಕೆ ಮಂಗಳೂರು ಮೂಲದ ರಚನಾ ರೈ ನಾಯಕಿಯಾಗಿ ಆಯ್ಕೆಯಾಗಿದ್ದಾರೆ
ಸಿನಿವಾರ್ತೆ
ದರ್ಶನ್ ನಟನೆಯ ‘ಡೆವಿಲ್’ ಚಿತ್ರದ ನಾಯಕಿಯನ್ನು ಕೊನೆಗೂ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಪುತ್ತೂರು ಮೂಲದ ರಚನಾ ರೈ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಎರಡು ತಿಂಗಳ ಹಿಂದೆಯೇ ರಚನಾ ರೈ ಚಿತ್ರದ ನಾಯಕಿ ಎನ್ನುವ ಸುದ್ದಿ ಓಡಾಡಿತ್ತು. ಆಗ ನಿರ್ದೇಶಕ ಮಿಲನ ಪ್ರಕಾಶ್ ‘ಇದು ಸುಳ್ಳು ಸುದ್ದಿ’ ಎಂದಿದ್ದರು. ಈಗ ಅದೇ ರಚನಾ ರೈ ನಾಯಕಿ ಆಗಿದ್ದಾರೆ.
ಪತ್ರಿಕೋದ್ಯಮದಲ್ಲಿ ಪದವಿ ಮಾಡಿರುವ ರಚನಾ ರೈ, ಭರತನಾಟ್ಯ ಕಲಾವಿದೆ. ರೂಪೇಶ್ ಶೆಟ್ಟಿ ಜತೆಗೆ ‘ಸರ್ಕಸ್’, ಧನ್ವೀರ್ ಜತೆಗೆ ‘ವಾಮನ’ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಎರಡನೇ ಶೆಡ್ಯೂಲ್ ಶೂಟಿಂಗ್ ಆರಂಭವಾಗಿದ್ದು, ಅಚ್ಯುತ್ ಕುಮಾರ್, ಬಾಲಿವುಡ್‌ನ ಮಹೇಶ್ ಮಾಂಜ್ರೇಕರ್ ಜತೆಯಾಗಿದ್ದಾರೆ.