ಸಾರಾಂಶ
ಚಕ್ರಾಂಕ ಸಿನಿಮಾದ ಮುಹೂರ್ತ ತುಮಕೂರಿನಲ್ಲಿ ನಡೆದಿದೆ.
ಕನ್ನಡಪ್ರಭ ಸಿನಿವಾರ್ತೆ
ವಾಸುಕೀರ್ತಿ ವರ್ಧನ್ ನಿರ್ದೇಶನ, ಹರ್ಷ ಆರ್ ಮಧುಗಿರಿ ನಿರ್ಮಾಣದ ‘ಚಕ್ರಾಂಕ’ ಸಿನಿಮಾ ಸೆಟ್ಟೇರಿದೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ತುಮಕೂರು ಜಿಲ್ಲೆ ಶಿರಾದ ತೊಗರಗುಂಟೆ ಅಮ್ಮಾಜಮ್ಮ ದೇವಸ್ಥಾನದಲ್ಲಿ ನಡೆಯಿತು. ಸಹಕಾರ ಸಚಿವ ಕೆ ಎನ್ ರಾಜಣ್ಣ, ಕನ್ನಡಪ್ರಭ ಪುರವಣಿ ವಿಭಾಗದ ಪ್ರಧಾನ ಸಂಪಾದಕ ಜೋಗಿ ಮೊದಲಾದವರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ರಂಗಭೂಮಿ ಹಿನ್ನೆಲೆಯ ನಂದಕುಮಾರ್ ಜಿಕೆ ನಾಯಕನಾಗಿರುವ ‘ಚಕ್ರಾಂಕ’ ಸಿನಿಮಾಕ್ಕೆ ‘ಲೂಟಿಯಾಗದ ಕೋಟೆ’ ಎಂಬ ಟ್ಯಾಗ್‌ಲೈನ್ ಇದೆ.