ಖ್ಯಾತ ಗಾಯಕ ವಿದ್ಯಾಭೂಷಣ ಹರಿದಾಸರ ದಿನಚರಿ ಸಿನಿಮಾ ಮೂಲಕ ಪುರಂದರ ದಾಸರ ಪಾತ್ರದಲ್ಲಿ ಸ್ಯಾಂಡಲ್‌ವುಡ್‌ಗೆ

| Published : Nov 16 2024, 12:31 AM IST / Updated: Nov 16 2024, 07:24 AM IST

ಸಾರಾಂಶ

ಖ್ಯಾತ ಗಾಯಕ ವಿದ್ಯಾಭೂಷಣ ಹರಿದಾಸರ ದಿನಚರಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ.

ಖ್ಯಾತ ಗಾಯಕ ಶ್ರೀ ವಿದ್ಯಾಭೂಷಣ ಅವರು ‘ಹರಿದಾಸರ ದಿನಚರಿ’ ಎಂಬ ಸಿನಿಮಾದಲ್ಲಿ ಪುರಂದರ ದಾಸರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ವಿದ್ಯಾಭೂಷಣರೇ ಸಂಗೀತ ಸಂಯೋಜನೆ ಮಾಡಿ ಹಾಡುತ್ತಿರುವುದು ವಿಶೇಷ. 

ಈ ಸಿನಿಮಾ ಕುರಿತು ನಿರ್ಮಾಪಕ, ನಿರ್ದೇಶಕ ಗಿರೀಶ್‌ ನಾಗರಾಜ್‌, ‘ದೊಡ್ಡಮಳೂರಿನ ಅಪ್ರಮೇಯ ಸ್ವಾಮಿ ದೇವಾಲಯದಲ್ಲಿ ಕೃಷ್ಣನ ವಿಗ್ರಹದ ದರ್ಶನ ಪಡೆದು ‘ಜಗದೋದ್ಧಾರನ ಆಡಿಸಿದಳೆಶೋದೆ’ ಪದ್ಯವನ್ನು ರಚಿಸಿದ ಐತಿಹಾಸಿಕ ಘಟನೆಯ ಮೂಲ ಚಿತ್ರಣ ಈ ಸಿನಿಮಾದ ಹೈಲೈಟ್‌. ಪುರಂದರ ದಾಸರ ಬದುಕಿನ ಚಿತ್ರಣ ಇದೆ. ಉಗಾಭೋಗಗಳನ್ನು ಕಥೆಗೆ ಪೂರಕವಾಗಿ ಹೆಣೆಯಲಾಗಿದೆ’ ಎಂದರು.ಉಡುಪಿಯ ಕೃಷ್ಣಮಠದಲ್ಲಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಟ್ರೇಲರ್‌ ಅನಾವರಣ ಮಾಡಿದ್ದಾರೆ. ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಸುಶೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.