ಸಮರ್‌ಜಿತ್‌ ಜೊತೆ ಸಾನ್ಯಾ, ಸಂಯುಕ್ತಾ ಹೆಗ್ಡೆ ಡಾನ್ಸ್

| Published : May 10 2024, 11:47 PM IST

ಸಮರ್‌ಜಿತ್‌ ಜೊತೆ ಸಾನ್ಯಾ, ಸಂಯುಕ್ತಾ ಹೆಗ್ಡೆ ಡಾನ್ಸ್
Share this Article
  • FB
  • TW
  • Linkdin
  • Email

ಸಾರಾಂಶ

ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾದ ಮೊದಲ ಲಿರಿಕಲ್ ಹಾಡು ಬಿಡುಗಡೆ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ‘ಗೌರಿ’ ಚಿತ್ರದ ಮೊದಲ ಲಿರಿಕಲ್‌ ಹಾಡು ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ. ಚಿತ್ರದ ನಾಯಕ ಸಮರ್ಜಿತ್‌, ನಾಯಕಿ ಸಾನ್ಯಾ ಅಯ್ಯರ್‌, ಸಂಯುಕ್ತಾ ಹೆಗ್ಡೆ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾರೆ. ಚಂದನ್‌ ಶೆಟ್ಟಿ ಹಾಡಿದ್ದಾರೆ.

ಇಂದ್ರಜಿತ್‌, ‘ಇದು ಡ್ಯಾನ್ಸ್‌ ನಂಬರ್‌ ಹಾಡು. ಚಿತ್ರದಲ್ಲಿ ಒಟ್ಟು 7 ಹಾಡುಗಳಿವೆ. ಮೊದಲ ಹಾಡನ್ನು ನಿಮ್ಮ ಮುಂದೆ ತಂದಿದ್ದೇವೆ. ಮೂರು ಜನ ಸಂಗೀತ ಮಾಡಿದ್ದಾರೆ’ ಎಂದರು.

ಸಮರ್ಜಿತ್‌, ‘ಟೈಮ್‌ ಬರುತ್ತೆ...ಎಂದು ಸಾಗುವ ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ. ಹಾಡು ಕೇಳಿದರೆ ಡ್ಯಾನ್ಸ್‌ ಮಾಡಬೇಕು ಅನಿಸುತ್ತದೆ’ ಎಂದರು. ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳು ಸಿನಿಮಾ ತೆರೆಗೆ ಬರಲಿದೆ.