ಆನೆಗುಡ್ಡೆ ದೇವಾಲಯದಲ್ಲಿ ಗಾಡ್‌ಪ್ರಾಮಿಸ್‌ ಮುಹೂರ್ತ

| Published : May 10 2024, 11:46 PM IST

ಸಾರಾಂಶ

ಆನೆಗುಡ್ಡೆ ದೇವಾಲಯದಲ್ಲಿ ಸೂಚನ್ ಶೆಟ್ಟಿ ನಟನೆ, ನಿರ್ದೇಶನದ ಗಾಡ್‌ಫಾದರ್ ಸಿನಿಮಾ ಮುಹೂರ್ತ

ಕನ್ನಡಪ್ರಭ ಸಿನಿವಾರ್ತೆ

ಕುಂದಾಪುರದ ಆನೆಗುಡ್ಡೆ ಗಣಪತಿ ದೇವಾಲಯದಲ್ಲಿ ಸೂಚನ್‌ ಶೆಟ್ಟಿ ನಟನೆ, ನಿರ್ದೇಶನದ ‘ಗಾಡ್‌ ಪ್ರಾಮಿಸ್‌’ ಚಿತ್ರಕ್ಕೆ ಮುಹೂರ್ತ ನಡೆದಿದೆ. ರವಿ ಬಸ್ರೂರ್ ಕ್ಲಾಪ್ ಮಾಡಿದರೆ ಪ್ರಮೋದ್ ಶೆಟ್ಟಿ ಕ್ಯಾಮೆರಾಗೆ ಚಾಲನೆ ನೀಡಿದ್ದಾರೆ.

ರವಿ ಬಸ್ರೂರ್‌, ‘ನಮ್ಮ ಕರಾವಳಿಯ ಯುವ ಪ್ರತಿಭೆಗಳಿಗೆ ಒಳ್ಳೆ ವೇದಿಕೆ ಸಿಗುತ್ತಿಲ್ಲ. ನಮ್ಮ ಜೊತೆ ಬಂದವರಿಗೆ ಕೆಲಸ ಕಲಿಯಲು ಹೇಳುತ್ತೇನೆ. ಎಲ್ಲರೂ ಎಲ್ಲಾ ವಿಭಾಗದ ಕೆಲಸವನ್ನೂ ಕಲಿಯಬೇಕು. ಹಾಗಿದ್ದರೆ ಮಾತ್ರ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿ ಇರಲು ಸಾಧ್ಯ’ ಎಂದು ಕಿವಿಮಾತು ಹೇಳಿದರು. ಮೈತ್ರಿ ಮಂಜುನಾಥ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.