ಜ.26ಕ್ಕೆ ಬ್ಯಾಚುಲರ್ ಪಾರ್ಟಿ ಸಿನಿಮಾ ಬಿಡುಗಡೆ

| Published : Dec 23 2023, 01:46 AM IST

ಸಾರಾಂಶ

ಜ.26ಕ್ಕೆ ರಕ್ಷಿತ್ ಶೆಟ್ಟಿ ನಿರ್ಮಾಣ, ಅಭಿಜಿತ್ ಮಹೇಶ್ ನಿರ್ದೇಶನದ ಬ್ಯಾಚುಲರ್ ಪಾರ್ಟಿ ಸಿನಿಮಾ ಬಿಡುಗಡೆ

ಕನ್ನಡಪ್ರಭ ಸಿನಿವಾರ್ತೆ

ರಕ್ಷಿತ್ ಶೆಟ್ಟಿ ನಿರ್ಮಾಣ, ಅಭಿಜಿತ್ ಮಹೇಶ್‌ ನಿರ್ದೇಶನದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಜ.26ಕ್ಕೆ ಬಿಡುಗಡೆಯಾಗಲಿದೆ. ಲೂಸ್‌ ಮಾದ ಯೋಗಿ, ಅಚ್ಯುತ್‌ ಕುಮಾರ್‌, ಸಿರಿ ರವಿಕುಮಾರ್‌, ಮನೋಹರ ಬಾಲಾಜಿ, ಪ್ರಕಾಶ್ ತುಮಿನಾಡು ಮುಖ್ಯಪಾತ್ರದಲ್ಲಿ ನಟಿಸಿರುವ ಚಿತ್ರವಿದು. ಕಿರಿಕ್‌ ಪಾರ್ಟಿ ಸಿನಿಮಾದ ಮುಂದುವರಿಕೆಯಾಗಿ ಬ್ಯಾಚುಲರ್ ಲೈಫಿನ ಮಜವಾದ ಕಥೆಯೊಂದಿಗೆ ಈ ಚಿತ್ರ ಮೂಡಿಬರಲಿದೆ. ಔಟ್‌ ಆ್ಯಂಡ್ ಔಟ್ ಕಾಮಿಡಿ ಜಾನರಾದ ಈ ಚಿತ್ರದಲ್ಲಿ ಥಾಲ್ಯಾಂಡ್‌ನ ಮತ್ತೊಂದು ಮಗ್ಗಲು ತೆರೆದುಕೊಳ್ಳಲಿದೆ. ಗಣರಾಜ್ಯೋತ್ಸವದಂದು ಲಾಂಗ್ ವೀಕೆಂಡ್ ಇರುವ ಕಾರಣ ಈ ಸಿನಿಮಾ ಬಿಡುಗಡೆ ಮಾಡುತ್ತಿರುವುದಾಗಿ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.