ವಿಷ್ಣುವರ್ಧನ್ ಸ್ಮಾರಕದಲ್ಲಿ ರಾನಿ ಚಿತ್ರೀಕರಣ ಮುಕ್ತಾಯ

| Published : Dec 23 2023, 01:45 AM IST

ವಿಷ್ಣುವರ್ಧನ್ ಸ್ಮಾರಕದಲ್ಲಿ ರಾನಿ ಚಿತ್ರೀಕರಣ ಮುಕ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನ ವಿಷ್ಣುವರ್ಧನ್ ಸಮಾಧಿಯಲ್ಲಿ ಕುಂಬಳಕಾಯಿ ಒಡೆದ ರಾನಿ ಚಿತ್ರತಂಡ.

ಕನ್ನಡಪ್ರಭ ಸಿನಿವಾರ್ತೆ

‘ಕನ್ನಡತಿ’ ಖ್ಯಾತಿಯ ಕಿರಣ್ ರಾಜ್‌ ನಾಯಕನಾಗಿರುವ ‘ರಾನಿ’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಮೈಸೂರಿನ ವಿಷ್ಣುವರ್ಧನ್‌ ಸ್ಮಾರಕದಲ್ಲಿ ನಡೆದಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೂಪುಗೊಳ್ಳುತ್ತಿರುವ ಈ ಸಿನಿಮಾವನ್ನು ಗುರುತೇಜ್ ಶೆಟ್ಟಿ ನಿರ್ದೇಶಿಸಿದ್ದಾರೆ. ಆ್ಯಕ್ಷನ್ ಮತ್ತು ಭಾವುಕತೆ ಎರಡರ ಮಿಶ್ರಣ ಈ ಸಿನಿಮಾ ಎಂದು ಅವರು ಈ ಹಿಂದೆ ತಿಳಿಸಿದ್ದರು. ಚಿತ್ರದಲ್ಲಿ ರಾಧ್ಯ, ಸಮೀಕ್ಷಾ ಮತ್ತು ಅಪೂರ್ವ ನಾಯಕಿಯರಾಗಿ ನಟಿಸಿದ್ದಾರೆ. ಚಂದ್ರಕಾಂತ್ ಪೂಜಾರಿ, ಉಮೇಶ ಹೆಗ್ಡೆ ನಿರ್ಮಿಸಿದ್ದಾರೆ. ರವಿಶಂಕರ್, ಮಠ ಗುರುಪ್ರಸಾದ್, ಯಶ್ ಶೆಟ್ಟಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರ್, ಮೈಕೋ ನಾಗರಾಜ್, ಉಗ್ರಂ ಮಂಜು ನಟಿಸಿದ್ದಾರೆ.