ಬೋಲ್ಡ್‌ ಆ್ಯಂಡ್‌ ಬ್ಯೂಟಿಫುಲ್‌ ಫೋಟೋ ಶೂಟ್‌ ಮಾಡಿಸಿರುವ ಟೋಬಿ ಹುಡುಗಿ ಚೈತ್ರಾ ಆಚಾರ್‌

 ಸಿನಿವಾರ್ತೆ

ನಟನೆ, ಫೋಟೋಶೂಟ್‌, ವಿಭಿನ್ನ ನಿಲುವುಗಳಿಂದ ಗಮನ ಸೆಳೆಯುವ ಕಲಾವಿದೆ ಚೈತ್ರಾ ಆಚಾರ್ ಹೊಸತಾಗಿ ಬೋಲ್ಡ್‌ ಆ್ಯಂಡ್‌ ಬ್ಯೂಟಿಫುಲ್‌ ಫೋಟ್‌ಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೆಣ್ಣಿನ ಅಸ್ಮಿತೆಯ ಕುರಿತು ಅರಿವು ಮೂಡಿಸುವ ಸಲುವಾಗಿ ಈ ಫೋಟೋಶೂಟ್‌ನಲ್ಲಿ ಭಾಗವಹಿಸಿದ್ದಾಗಿ ಅವರು ತಿಳಿಸಿದ್ದಾರೆ.

ಚೆನ್ನೈ ಮೂಲದ ಬರ್ಲಿನ್‌ ಫೋಟೋಗ್ರಾಫರ್‌ ಅಂಜನ್‌ ಕುಮಾರ್‌ ಅವರು ಚೈತ್ರಾ ಅವರ ಹಲವು ವಿಭಿನ್ನ ಭಂಗಿಗಳ ಅತ್ಯಾಕರ್ಷಕ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ. ಹೆಣ್ಣಿನ ಅಸಂಗತ ಪೇಂಟಿಂಗ್‌ ಮಾದರಿಯ ಛಾಯಾಚಿತ್ರಗಳಿಗೆ ಹೆಸರಾದ ಈ ಫೋಟೋಗ್ರಾಫರ್‌ ಕ್ಲಿಕ್ಕಿಸಿದ ಫೋಟೋಗಳ ಕುರಿತು ಚೈತ್ರಾ, ‘ಹೆಣ್ಣಿನಲ್ಲಿ ಹಲವಾರು ಅದ್ಭುತ ವಿಚಾರಗಳಿವೆ, ಆಕೆಯ ದೇಹ ಅದರಲ್ಲೊಂದು’ ಎಂದು ಹೇಳಿದ್ದಾರೆ.

ಈ ಫೋಟೋಶೂಟ್‌ ಕುರಿತು ಚೈತ್ರಾ, ‘ಈ ಫೋಟೋಗ್ರಫಿ ಹೆಣ್ಣಿನ ಸೌಂದರ್ಯವನ್ನು ಭಿನ್ನ ಮಾದರಿಯಲ್ಲಿ ಅಭಿವ್ಯಕ್ತಿಸಿದೆ. ಹೆಣ್ಣು ಅಂದಾಗ ಮೊದಲಿಗೆ ಅವಳ ದೈಹಿಕ ಸೌಂದರ್ಯ ಕಣ್ಮುಂದೆ ಬಂದರೂ, ಅವಳು ಅಷ್ಟೇ ಅಲ್ಲ, ಅವಳ ಅಸ್ಮಿತೆ ಬೇರೆಯೇ ಇದೆ. ಅದನ್ನು ನಾವು ಮನಗಾಣಬೇಕಿದೆ’ ಎಂದು ಹೇಳಿದರು.ಕೋಟ್

ಹೆಣ್ಣು ಅಂದಾಗ ಮೊದಲಿಗೆ ಅವಳ ದೈಹಿಕ ಸೌಂದರ್ಯ ಕಣ್ಮುಂದೆ ಬಂದರೂ, ಅವಳು ಅಷ್ಟೇ ಅಲ್ಲ, ಅವಳ ಅಸ್ಮಿತೆ ಬೇರೆಯೇ ಇದೆ.

- ಚೈತ್ರಾ ಆಚಾರ್